ನೆರೆ ಸಂತ್ರಸ್ಥರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ 25 ಕೋಟಿ ರೂಪಾಯಿ ನೆರವು

ಮಂಗಳೂರು ಅಗಸ್ಟ್ 17: ರಾಜ್ಯದಲ್ಲಿ ತಲೆದೋರಿದ ಭೀಕರ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಮುಂದೆ ಬಂದಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೀಡುವ ಮೂಲಕ ಧರ್ಮಸ್ಥಳ ಸಂತ್ರಸ್ಥರಿಗೆ ನೆರವಾಗಿ ನಿಂತಿದೆ.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳು ಪ್ರವಾಹದಿಂದ ಕಂಗೆಟ್ಟಿರುವುದನ್ನು ಪರಿಗಣಿಸಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಈ ನೆರವನ್ನು ನೀಡಲು ಮುಂದಾಗಿದ್ದಾರೆ.

ಅಲ್ಲದೆ ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ನೆರೆ ತೋರಿದ ಭೀಕರತೆಗೆ ಮರುಗಿರುವ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರು ಬೆಳ್ತಂಗಡಿ ತಾಲೂಕಿಗೆ 50 ಲಕ್ಷದ ವಿಶೇಷ ಪ್ಯಾಕೇಜನ್ನೂ ಘೋಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿಗೆ ಘೋಷಿಸಿದ ಪ್ಯಾಕೇಜ್ ಚೆಕ್ಕನ್ನು ಸ್ಥಳೀಯ ಶಾಸಕ‌ ಹರೀಶ್ ಪೂಂಜಾ ಅವರಿಗೆ ಹಸ್ತಾಂತರಿಸಿದ್ದಾರೆ.

VIDEO

Facebook Comments

comments