DAKSHINA KANNADA
ಪಹಲ್ಗಾಮ್ ದಾಳಿಯನ್ನು ಮಾಧ್ಯಮಗಳು ಕೋಮು ದ್ವೇಷದ toolkit ಆಗಿ ಉಪಯೋಗಿಸುತ್ತಿದೆ: ರಿಯಾಸ್ ಕಡಂಬು

ಮಂಗಳೂರು, ಏಪ್ರಿಲ್ 23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಎಸ್ ಡಿ ಪಿ ಐ ವತಿಯಿಂದ ನಗರದ ಜ್ಯೋತಿ ಸರ್ಕಲ್ ಮುಂದೆ ಮೊಂಬತ್ತಿ ಹಿಡಿದು ಪ್ರತಿಭಟಿಸಿ ಮೌನ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ನ ರಾಜ್ಯ ಕಾರ್ಯದರ್ಶಿ ರಿಯಾಸ್ ಕಡಂಬು ಪಹಲ್ಗಾಮ್ ದಾಳಿಯನ್ನು ಮಾಧ್ಯಮಗಳು ಕೋಮು ದ್ವೇಷದ toolkit ಆಗಿ ಉಪಯೋಗಿಸುತ್ತಿದೆ, ಮೋದಿ ಸರಕಾರ ಬಂದ ಬಳಿಕ ಈ ರೀತಿ ಹಲವು ದಾಳಿ ನಡೆದಿದೆ.

ಅಮಾನವೀಯ ದಾಳಿ ಮಾಡುವವ ಯಾವ ಧರ್ಮದವನಾದ್ರೂ ಒಪ್ಪಿಕೊಳ್ಳು ಆಗುವುದಿಲ್ಲ, ಭಯೋತ್ಪಾದಕರನ್ನು ತಡೆಯುವಲ್ಲಿ ಮೋದಿ ಸರಕಾರ ಸಂಪೂರ್ಣ ವೈಫಲ್ಯವಾಗಿದೆ. ದೇಶದ ಪ್ರಜೆಗಳಿಗೆ ರಕ್ಷಣೆ ಕೊಡಲು ಆಗದ ಕೇಂದ್ರ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದರು.