Connect with us

    LATEST NEWS

    ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಕ್ಷ ಒಬ್ಬ ಪಂಚಾಯತ್ ಸದಸ್ಯನಾಗಲು ಯೋಗ್ಯರಲ್ಲ – ಗೃಹ ಸಚಿವ ಎಂ.ಬಿ ಪಾಟೀಲ್

    ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಕ್ಷ ಒಬ್ಬ ಪಂಚಾಯತ್ ಸದಸ್ಯನಾಗಲು ಯೋಗ್ಯರಲ್ಲ – ಗೃಹ ಸಚಿವ ಎಂ.ಬಿ ಪಾಟೀಲ್

    ಮಂಗಳೂರು ಜನವರಿ 28: ಹಿಂದೂ ಹುಡುಗಿಯ ಮುಟ್ಟಿದರೆ ಆ ಕೈ ಇರಬಾರದು ಎಂದು ಹೇಳಿಕೆ ನೀಡಿದ್ದ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ದ ಗೃಹ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

    ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಕ್ಷ ಒಬ್ಬ ಪಂಚಾಯತ್ ಸದಸ್ಯನಾಗಲು ಯೋಗ್ಯರಲ್ಲ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರಲು ಬಯಸುತ್ತಾರೆ.

    ಅವರಿಗೆ ಸಂಸತ್ ಹಾಗೂ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನೇ ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂಥವರು ಸಂಸತ್ ಸದಸ್ಯರಾಗಲು ಯೋಗ್ಯರಲ್ಲ ಎಂದು ಹೇಳಿದರು.

    ಕೋಮು ಘರ್ಷಣೆ ಆರಂಭಿಸಲು ಇಂಥಹ ಹೇಳಿಕೆಯನ್ನು ಅನಂತ್ ಕುಮಾರ್ ಹೆಗ್ಡೆ ಅವರು ನೀಡುತ್ತಾರೆ. ಸಂವಿಧಾನಕ್ಕೆ ಗೌರವಿಸದವರಿಗೆ ಲೋಕಸಭೆ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply