ಅಭಿವ್ಯಕ್ತಿ ಸ್ವಾತಂತ್ರ್ಯ ಬಳಕೆ ಬಗ್ಗೆ ನಿಗಾ ಇರಲಿ- ಯು.ಟಿ ಖಾದರ್

ಮಂಗಳೂರು ಜನವರಿ 26: ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂದು ಏನಾದರೂ ಮಾತನಾಡುವುದಲ್ಲ ಅಥವಾ ಬರೆಯುವುದಲ್ಲ. ಈ ದೇಶದ ಹಿತಾಸಕ್ತಿ ವಿರುದ್ಧವಾಗಿ ಅಥವಾ ಈ ದೇಶದ ಏಕತೆ ಸಮಗ್ರತೆಗೆ ಮಾರಕವಾದ ವಿಚಾರಗಳನ್ನು ನಾವು, ಅದರಲ್ಲೂ ನಮ್ಮ ವಿದ್ಯಾವಂತ ಯುವ ಜನಾಂಗ ಎಂದೂ ಮಾತನಾಡಬಾರದು , ಬರೆಯಬಾರದು . ಒಂದು ಜವಬ್ದಾರಿಯುತ ಯುವ ಜನಾಂಗವೇ ದೇಶದ ಅಮೂಲ್ಯ ಸೋತ್ತಾಗಿರುತ್ತದೆ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಇಂದು ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯೋತ್ಸವದ ಸಂದೇಶ ನೀಡಿ ಯು ಟಿ ಖಾದರ್ ವರ್ಷದ 365 ದಿನದ 24 ಗಂಟೆ ಚಳಿ ,ಮಳೆ, ಗಾಳಿ ಯನ್ನು ಲೆಕ್ಕಿಸದೇ ಭಾರತಾಂಬೆಯ ನೆಲಕಾಯುವ ನಮ್ಮ ಸೈನಿಕರ ತ್ಯಾಗ , ಬಲಿದಾನಕ್ಕೆ, ಬೆಲೆ ಕಟ್ಟಲು ಸಾಧ್ಯವಿಲ್ಲ . ನಾವೇಲ್ಲ ಅವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಕಡಿಮೆಯೇ . ಈ ಸೈನಿಕರ ತ್ಯಾಗ ಬಲಿದಾನ ದಿಂದಾಗಿ ಇಂದು ಭಾರತ ಜನಗತ್ತಿನಲ್ಲಿ ಗೌರವ ದಿಂದ ತಲೆ ಎತ್ತಿನಿಂತಿದೆ ಎಂದು ಹೇಳಿದರು.

2 Shares

Facebook Comments

comments