Connect with us

    DAKSHINA KANNADA

    ಮಳೆಗಾಲ ಮುಗಿಯ್ತು ಅಂತ ಅಂದ್ಕೊಳ್ಳಬೇಡಿ, ಸೆ. 21ರಿಂದ ರಾಜ್ಯದಲ್ಲಿ ಮತ್ತೆ ಮಳೆ ಶುರು…!

    ಬೆಂಗಳೂರು : ಸೆಪ್ಟೆಂಬರ್ 21 ರಿಂದ ಕರ್ನಾಟಕದಾದ್ಯಂತ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ (Rain Alert)  ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 21ರ ಬಳಿಕ ಮತ್ತೆ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಕರ್ನಾಟಕದಲ್ಲಿ ಮುಂಗಾರು ಕಡಿಮೆಯಾಗುತ್ತಿದೆ ಎಂದು ಅಂದಾಜಿಸಲಾ್ಗಿತ್ತು. ಮಳೆ ಕಡಿಮೆಯಾಗಿ ಚಳಿ ಆರಂಭವಾಗುತ್ತಿತ್ತು. ಆದ್ರೆ ಅನೇಕ ಕಡೆ ಬಿಸಿಲಿನ ಝಳ ಹೆಚ್ಚಾಗತೊಡಗಿದೆ. ಮೊದಲೆಲ್ಲಾ ಮಳೆಗಾಲ ನಿಂತ ಬಳಿಕ ಸ್ವಲ್ಪ ದಿನಗಳ ಕಾಲ ತಂಪಾದ ವಾತಾವರಣವಿರುತ್ತಿತ್ತು ಆದರೆ ಈಗ ಮಳೆ ಕಡಿಮೆಯಾಗುತ್ತಿದ್ದಂತೆ ತಾಪಮಾನ ಹೆಚ್ಚಳವಾಗುತ್ತಿರುವುದು ಜನತೆಯನ್ನು ಕಂಗೆಡಿಸಿದೆ.  .

    Share Information
    Advertisement
    Click to comment

    You must be logged in to post a comment Login

    Leave a Reply