DAKSHINA KANNADA
ನವೀನ್ ಪಿರೇರಾ ಸುರತ್ಕಲ್, ಗೋವಾದ ಉದಯ್ ನರಸಿಂಹ ಮೆಂಬ್ರೊ ಈ ಬಾರಿಯ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸನ್ಮಾನಕ್ಕೆ ಆಯ್ಕೆ..!
ಪಣಜಿ : ಮಂಗಳೂರು ಸುರತ್ಕಲಿನ ನವೀನ್ ಪಿರೇರಾ , ಗೋವಾದ ಉದಯ್ ನರಸಿಂಹ ಮೆಂಬ್ರೊ ಅವರು ಈ ಬಾರಿಯ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸನ್ಮಾನಕ್ಕೆ (National Charoli Sahitya Award) ಆಯ್ಕೆಯಾಗಿದ್ದಾರೆ.
ಗೋವಾದ ಪಣಜಿಯಲ್ಲಿ ನಡೆಯುವ ಮೂರನೆಯ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರದ ಚಾರೊಳಿ ಸಾಹಿತ್ಯದ ಅತ್ಯುನ್ನತ ಸನ್ಮಾನವನ್ನು ಮಂಗಳೂರಿನ ಆಶು ಕವಿ ಪೊಯೆಟಿಕಾ ಕವಿ ಕೂಟದ ಪ್ರವರ್ತಕ ಸಿವಿಲ್ ಇಂಜಿನಿಯರ್ ನವೀನ ಪಿರೇರಾ ಸುರತ್ಕಲ್ ಅವರು ಗೋವಾದ ರಾಜ್ಯ ಸರಕಾರದ ಹಲವು ಪ್ರಸಸ್ತಿಗಳ ಭಾಜನ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ಉದಯ್ ನರಸಿಂಹ ಮೆಂಬ್ರೊ ಅವರ ಜೊತೆಯಲ್ಲಿ ಜಂಟಿಯಾಗಿ ಪಡೆಯಲಿದ್ದಾರೆ. ಹಿರಿಯ ಪತ್ರಕರ್ತರು, ಬಹು ಭಾಷಾ ಸಾಹಿತಿ ಹಾಗೂ ಅಖಿಲ ಭಾರತ ಚಾರೊಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಈ ಮಾಹಿತಿ ನೀಡಿದ್ದಾರೆ.
ಇದೇ ಸಪ್ಟೆಂಬರ್ ತಿಂಗಳ 22 ರವಿವಾರ ಗೋವಾದ ಪಣಜಿಯಲ್ಲಿ ನಡೆಯುವ ಮೂರನೆಯ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸನ್ಮಾನ ನಡೆಯಲಿದೆ.
ಕೇರಳ, ಕರ್ನಾಟಕ, ಗೋವ, ಆಂದ್ರ, ಮಹಾರಾಷ್ಟ್ರ, ದೆಹಲಿ ಪ್ರದೇಶದ ಕೊಂಕಣಿ ಮಾತೃಭಾಷೆ ಚಾರೊಳಿ ಸಾಹಿತಿಗಳು, ಚಿಂತಕರು, ವಿಷಯಗಳ ಮಂಡನೆ ಹಾಗೂ ಕವಿವಾಣಿ ಸಾಧರ ಪಡಿಸುವರು.
ಇದರ ಹಿಂದೆ ಮೊದಲಿಗೆ 2022 ರಲ್ಲಿ ಗೋವಾದ ಕಲಾ ಶಿಕ್ಷಕರು ಹಾಗೂ ಕವಿ, ಸಾಹಿತಿ ಗೌರೀಶ ವರ್ಣೇಕರ್ ಹಾಗೂ ಕೇರಳದ ಹಿರಿಯ ಕವಿ ಆರ್ ಎಸ್ ಭಾಸ್ಕರ್ ಹಾಗೂ 2023ರ ದ್ವಿತೀಯ ಸಮ್ಮೇಳನದಲ್ಲಿ ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಹಾಗೂ ಗೋವಾದ ರಾಜಯ್ ಪವಾರ್ ಸನ್ಮಾನಿತರಾಗಿದ್ದರು.
ಮೊದಲ ಸಮ್ಮೇಳನ ಮಂಗಳೂರು, ದ್ವಿತೀಯ ಮತ್ತು ಇದು ತೃತೀಯ ಗೋವಾದಲ್ಲಿ ರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತಲಿವೆ.ಸ್ಥಳೀಯ ಗೋವಾದ ಕವಿಕೂಟ ಉಗ್ತೆಂ ಮೊಳಬ್ ಈ ಬಾರಿಯ ಸ್ಥಳೀಯ ಸಂಯೋಜಕ ಸಂಸ್ಥೆಯಾಗಿ ಸಮ್ಮೇಳನದ ಆಯೋಜನೆ ಮಾಡಲಿದೆ.ಕಳೆದ 2023 ರ ಗೋವಾ ರಾಜ್ಯದ ಕೊಂಕಣಿ ಲೇಖಕರ ಸಂಘ ಸಮ್ಮೇಳನ ಸಂಯೋಜನೆ ಮಾಡಿದ್ದರು.ಆಖಿಲ ಭಾರತ ಕೊಂಕಣಿ ಚಾರೊಳಿ ಸಾಹಿತ್ಯ ಪರಿಷತ್ತಿನ ಸ್ಥಾಪಕ ಆಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಈ ಬಾರಿ ಗೋವಾದ ವಿವೇಕ ಪಿಸೂಲೆಕರ್, ಗೌರೀಶ ವರ್ಣೇಕರ್, ಕಾರವಾರದ ಸಂದೇಶ ಬಾಂದೇಕರ್,ಈ ರಾಷ್ಟ್ರೀಯ ಸಮ್ಮೇಳನದ ಸಂಯೋಜನೆ ಮಾಡಲು ರೇಮಂಡ್ ಡಿಕೂನಾ ತಾಕೊಡೆ ಜೊತೆಯಲ್ಲಿ ಸಂಚಾಲಕರಾಗಿ ಇದ್ದಾರೆ.
You must be logged in to post a comment Login