Connect with us

    LATEST NEWS

    ಮಸಾಜ್ ಪಾರ್ಲರ್ ಗೆ ದಾಳಿ : ಹನ್ನೊಂದು ಜನರ ಬಂಧನ

    ಮಸಾಜ್ ಪಾರ್ಲರ್ ಗೆ ದಾಳಿ : ಹನ್ನೊಂದು ಜನರ ಬಂಧನ

    ಮಂಗಳೂರು ಎಪ್ರಿಲ್ 2: ಮಂಗಳೂರು ನಗರದ ಮಸಾಜ್ ಪಾರ್ಲರ್ ಗೆ ಸಿಸಿಬಿ ಪೊಲೀಸರ ದಾಳಿ ನಡೆಸಿದ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್ ರಸ್ತೆಯಲ್ಲಿರುವ ಟೋಪಾಝ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ಸಂಜೀವಿನಿ ಆರ್ಯುವೇಧಿಕ್ ಥೆರಾಪಿ ಕ್ಲಿನಿಕ್ ಎಂಬ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆಗೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಹಾಗೂ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ.

    ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು. ಈ ಹಿನ್ನಲೆಯಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು 1) ಹರೀಶ್ ಶೆಟ್ಟಿ 2) ಸಿ ಕೆ ಪಟ್ಟಕಂಡಿ ಪ್ರಸೂರನ್, 3)ರವೂದ್ ಎಮ್ ಕೆ, 4)ಸಾದಕತುಲ್ಲಾ 5)ಅಬ್ದುಲ್ ರೆಹಮಾನ್, 6)ಸಚೀಂದ್ರ ಎಮ್, 7)ದಿತಿನ್ ದಾಸ್, 8)ಶಿಬೂಕೆ, 9) ಅನಸ್, 10)ರಾಜೇಶ್, 11)ಸಿಯಾದ್ ಟಿ ವಿ ಎಂದು ಗುರುತಿಸಲಾಗಿದೆ.

    ಬಂಧಿತ ಆರೋಪಿಗಳಿಂದ ಒಟ್ಟು 53,400/- ರೂಪಾಯಿ ನಗದು ಹಣ ಹಾಗೂ 13 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply