FILM
ಗೆಳೆಯನೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಮರಾಠಿ ನಟಿ ಅಪಘಾತದಲ್ಲಿ ಸಾವು

ಗೋವಾ : ತನ್ನ ಗೆಳೆಯನೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಮರಾಠಿ ನಟಿ ಈಶ್ವರಿ ದೇಶಪಾಂಡೆ ಮತ್ತು ಗೆಳೆಯ ಶುಭಂ ದಡ್ಗೆ ಕಾರಿನಲ್ಲಿ ಗೋವಾಗೆ ತೆರಳಿದ್ದರು. ಸೆಪ್ಟೆಂಬರ್ 20 ರಂದು ಬೆಳಗ್ಗೆ ಬಾರ್ಡೇಜ್ ತಾಲೂಕಿನ ಅರ್ಪೋರಾ ಬಳಿ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಕಾರು ಅಪಘಾತದಲ್ಲಿ 25 ವರ್ಷ ವಯಸ್ಸಿನ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಗೆಳೆಯ ಶುಭಂ ದಡ್ಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮರಾಠಿ ನಟಿ ಈಶ್ವರಿ ದೇಶಪಾಂಡೆ ಮತ್ತು ಗೆಳೆಯ ಶುಭಂ ದಡ್ಗೆ ಬಹುಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬಸ್ಥರೂ ಸಮ್ಮತಿ ನೀಡಿದ್ದರು. ಮುಂದಿನ ತಿಂಗಳು ಈಶ್ವರಿ ದೇಶಪಾಂಡೆ ಮತ್ತು ಗೆಳೆಯ ಶುಭಂ ದಡ್ಗೆ ನಿಶ್ಚಿತಾರ್ಥ ನಿಗದಿ ಆಗಿತ್ತು. ನಿಶ್ಚಿತಾರ್ಥಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ದುರಂತ ಸಂಭವಿಸಿದೆ.