Connect with us

KARNATAKA

ಪುಟ್ಟ ಮಕ್ಕಳ ಜತೆ ಮಕ್ಕಳಾಗಿ ಹೋದ್ರು ಮಂಗಳೂರು ಪೊಲೀಸ್ ಕಮಿಷನರ್..!     

ಒಂದೊತ್ತು ಕಾಲ ಕಳೆದು ಮಕ್ಕಳ ಜತೆ  ಮಕ್ಕಳಾಗಿ  ಹೋದ ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಅನುಪಮ್ ಅಗರ್ವಾಲ್ 

ತಾನು ಪೊಲೀಸ್  ಎಂದು ಕೆಲ ಹೊತ್ತಯ ಮರೆತೇ ಬಿಟ್ಟು.

 ಮಂಗಳೂರು : ಪೊಲೀಸ್ ಅಂದ್ರೆ ಭಯ ಸರ್ವೇ ಸಾಮಾನ್ಯ, ಪುಟ್ಟ ಮಕ್ಕಳಿಗೆ ಊಟ ಮಾಡದಿದ್ರೆ, ತುಂಟಾಟ ವಿಪರೀತವಾದ್ರೆ  ಪೊಲೀಸಪ್ಪನ ಕೈಗೆ ಕೊಡ್ತೇನೆ, ಪೋಲಿಸಪ್ಪ ಬರ್ತಾನೆ ಅಂತಾ ಪೋಷಕರು ಹೆದರಿಸುವುದು ಸರ್ವೇ ಸಾಮಾನ್ಯ.

ಪೊಲೀಸ್ ಇಲಾಖೆ ಮತ್ತು ಪೊಲೀಸರ ಭಯವನ್ನು ಹೋಗಲಾಡಿಸಲು ಪುಟ್ಟ ಮಕ್ಕಳ ಜೊತೆ ಮಂಗಳೂರು ಪೊಲೀಸ್ ಕಮಿಷನರ್ ಕೆಲ ಸಮಯವನ್ನು ಕಳೆದರು.

ಒಂದೊತ್ತು ಕಾಲ ಕಳೆದು ಮಕ್ಕಳ ಜತೆ  ಮಕ್ಕಳಾಗಿ  ಹೋದ ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಅನುಪಮ್ ಅಗರ್ವಾಲ್ 

ತಾನು ಪೊಲೀಸ್  ಎಂದು ಕೆಲ ಹೊತ್ತಯ ಮರೆತೇ ಬಿಟ್ಟು,

ಇದು ನಡೆದದ್ದು ಗುರುವಾರ ಬೆಳಗ್ಗೆ ಹೊತ್ತು ಮಂಗಳೂರು ಪೊಲೀಸ್ ಕಮಿಷನರ್ ಅಪೀಸ್ ಗೆ Euro kids KODIALBAIL Preschool MG Road ನ  ಯುನಿಪಾರ್ಮ್ ಧರಿಸಿ ಬಂದ  ಚಿಕ್ಕಮಕ್ಕಳು ಕಮಿಷನರ್ ಅವರನ್ನು ಮುಖಾತಃ  ಭೇಟಿ  ಆದಾಗ. 

ಕಚೇರಿಗೆ ಬಂದ ಪುಟ್ಟ ಮಕ್ಕಳನ್ನು ಬರಮಾಡಿಕೊಂಡ ಕಮಿಷನರ್  ಸುತ್ತ ಮುತ್ತ ಕೂತುಕೊಂಡ ಪುಟಾಣಿಗಳ ಪುಟ್ಟ ಪುಟ್ಟ ಪ್ರಶ್ನೆಗೆ ಉತ್ತರ ಕೊಡುವ ವಿದ್ಯಾರ್ಥಿಯಾದ್ರೆ  ಪುಟಾಣಿಗಳಿಗೆ  ಪ್ರಶ್ನೆ ಕೇಳುತ್ತಾ  ಮೇಸ್ಟ್ರು ಅಗಿಹೋದ್ರು ,

ಕಮಿಷನರ್ ಕೇಳಿದಾಗ ಕೆಲವು‌ ಮಕ್ಕಳು ಟೀಚರ್ ಇಷ್ಟ ಅಂದ್ರು ಕೆಲ ಮಕ್ಕಳು ನಿಮ್ಮ ಥರ ಪೊಲೀಸ್  ಅಗಬೇಕು ಅಂದ್ರು .

ನಂತರ ಮಕ್ಕಳಿಗೆ ಚಾಕಲೇಟ್,ಜ್ಯೂಸ್ ,ಪನ್ಸಿಲ್ ನೀಡಿದ್ರು ಮಕ್ಕಳು  ಬಹಳ ಖುಷಿ ಪಟ್ರು ಕಮಿಷನರ್ ಕಾನೂನು ಸುವ್ಯವಸ್ಥೆಯ ಒತ್ತಡ ನಡುವೆ ಒಂದೊತ್ತು ಕುಷಿ ಕುಷಿ ಅಗಿ ಹೋದ್ರು ನಾನೇ ಮಕ್ಕಳ ಜತೆ ಮಕ್ಕಳ ಥರಾ ಅಗಿಬಿಟ್ಟೆ ಅಂದ್ರು.

 ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆಯುವ ಮಕ್ಕಳಿಗೆ ಲವಲವಿಕೆ ಮತ್ತು ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವುದು  ಬಹಳ ಮುಖ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್  ಅಭಿಪ್ರಾಯಪಟ್ಟರು.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *