Connect with us

  DAKSHINA KANNADA

  ‘ಮಂಗಳೂರು ಜನ ರಾಜಕೀಯವಾಗಿ ಬುದ್ದಿವಂತರು, ಬಿಜೆಪಿಯವರನ್ನು ನಂಬಬೇಡಿ’ ; ಸಿಎಂ ಸಿದ್ದರಾಮಯ್ಯ

  ಮಂಗಳೂರು : ಮಂಗಳೂರಿನ ಜನ ರಾಜಕೀಯವಾಗಿ ಬುದ್ದಿವಂತರು. ದೇಶದಲ್ಲಿ ರಾಜ್ಯದಲ್ಲಿ ನಡೆಯುವ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲಿನ ಜನರಿಗಿದೆ. ಬಿಜೆಪಿಯವರನ್ನು ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  ಮಂಗಳೂರು ಅಡ್ಯಾರ್​ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, 10 ವರ್ಷದ ಹಿಂದೆ ನರೇಂದ್ರ ಮೋದಿ ಹೇಳಿದ್ದು ಯಾವುದು ಸಹ ಆಗಿಲ್ಲ. ಕೋಮುವಾದ, ಧರ್ಮ ಧರ್ಮಗಳ‌ ನಡುವೆ ಬೆಂಕಿ‌ಹಚ್ಚುವುದು ಬಿಟ್ಟರೆ ಬೇರೆನೂ ಗೊತ್ತಿಲ್ಲ ಬಿಜೆಪಿಯವರಿಗೆ ಮೋದಿಯೇ ಬಂಡವಾಳ. ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನ ಮೋದಿ ಮಾತು ಕೇಳಿಲ್ಲ. ಸಬ್​ಕಾ ಸಾಥ್, ಸಬ್​ಕಾ ವಿಕಾಸ್ ಎಲ್ಲೋಯ್ತು ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ. ಮೋದಿಯಷ್ಟು ಸುಳ್ಳು ಹೇಳುವ ಬೇರೆ ಪ್ರಧಾನಿಯನ್ನು ನಾನು ನೋಡಿಲ್ಲ. ಸ್ವತಂತ್ರ ಭಾರತದಲ್ಲಿ ಇವರಷ್ಟು ಸುಳ್ಳು ಹೇಳುವವರನ್ನು ನೋಡಿಲ್ಲ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ಹಣ ಮೀಸಲಿಟಿದ್ದೇವೆ. ಕೇಂದ್ರಕ್ಕೆ ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ರೂ. ತೆರಿಗೆ ಹೋಗುತ್ತೆ. ಆದರೆ ನಮಗೆ ವಾಪಸ್ ಬರೋದು 50 ಸಾವಿರದ 257 ಕೋಟಿ ರೂ. ಮಾತ್ರ ಎಂದು ಕಿಡಿಕಾರಿದ್ದಾರೆ. ಬಿಜೆಪಿಯವರು ಶ್ರೀಮಂತ, ಉದ್ಯಮಿಗಳು, ಕಾರ್ಪೊರೇಟ್​ ಪರವಾಗಿದ್ದಾರೆ. ನಾವು ಬಡವರು ಪರವಾಗಿದ್ದೇವೆ, ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ. ಕಾಂಗ್ರೆಸ್​ ಪಕ್ಷ ಮಾತ್ರ ಎಲ್ಲರಿಗೂ ನ್ಯಾಯ ಕೊಡುತ್ತೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಬಿಜೆಪಿಯವರನ್ನು ನೀಚರು ಎಂದು ವಾಗ್ದಾಳಿ ಮಾಡಿದ್ದಾರೆ. ರಾಜ್ಯದ ಜನರು ಮೋದಿ ಮಾತು ಕೇಳದೆ ನಮಗೆ 136 ಸ್ಥಾನ ಗೆಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಕರ್ನಾಟಕದಲ್ಲಿ ಕನಿಷ್ಟ 20 ಸ್ಥಾನಗಳನ್ನು ನಾವು ಗೆದ್ದೆ ಗೆಲುತ್ತೇವೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply