Connect with us

    DAKSHINA KANNADA

    ಮಂಗಳೂರು : ವೆಂಕಟರಮಣ ದೇವಳಕ್ಕೆ ಚಿತ್ರಪುರ ಶ್ರೀಗಳಿಗೆ ಭವ್ಯ ಸ್ವಾಗತ

    ಮಂಗಳೂರು : ಶ್ರೀ ಚಿತ್ರಪುರ ಮಠ ಶಿರಾಲಿ ಇದರ ಮಠಾಧಿಪತಿಗಳಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿಯಿತ್ತು ಶ್ರೀ ದೇವರ ದರ್ಶನ ಪಡೆದರು .

    ಮಂಗಳೂರಿನ ಪ್ರತಿಷ್ಠಿತ ಗೌಡ ಸಾರಸ್ವತ ಸಮಾಜದ ವಿನಂತಿ ಮೇರೆಗೆ ಶ್ರೀಗಳವರು ಶ್ರೀ ದೇವಳಕ್ಕೆ ಆಗಮಿಸಿದ್ದು , ಶ್ರೀಗಳವರಿಗೆ ಸಕಲ ಬಿರುದಾವಳಿ ಗೌರವದೊಂದಿಗೆ ಭವ್ಯ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು , ಬಳಿಕ ಶ್ರೀ ದೇವರ ವಸಂತ ಮಂಟಪದಲ್ಲಿ ಶ್ರೀ ಗಳವರ ಪಾದ ಪೂಜೆ , ಪುರಸ್ಕಾರಗಳು ಜರಗಿದವು , ಶ್ರೀಗಳವರಿಂದ ಭಜನೆ ಹಾಗೂ ಆಶೀರ್ವಚನ ನೆರವೇರಿತು .

    ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಪಂಡಿತ್ ನರಸಿಂಹ ಆಚಾರ್ಯ ಹಾಗೂ ಸಾವಿರಾರು ಸಮಾಜ ಭಾಂದವರು ಉಪಸ್ಥಿತರಿದ್ದರು , ಆಶೀರ್ವಚನ ಬಳಿಕ ನೆರೆದ ಭಜಕರಿಗೆ ಶ್ರೀಗಳವರು ಫಲ ಮಂತ್ರಕ್ಷತೆ ನೀಡಿ ಆಶೀರ್ವದಿಸಿದರು .
    ಚಿತ್ರ : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply