DAKSHINA KANNADA
ತಿರುಪತಿಯ ಪ್ರಸಾದದಲ್ಲಿ ಕೊಬ್ಬು ಮಿಶ್ರಣ, ಸೆ. 30 ರಂದು ಮಂಗಳೂರಿನಲ್ಲಿ VHPಯಿಂದ ಧರ್ಮಾಗ್ರಹ ಸಭೆ..!
ಮಂಗಳೂರು : ಪವಿತ್ರ ಶೃದ್ದಾ ಕೇಂದ್ರ ತಿರುಪತಿಯ ಪ್ರಸಾದದಲ್ಲಿ ಕೊಬ್ಬು ಮಿಶ್ರಣ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಾಗ್ರಹ ಸಭೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಸೆಪ್ಟೆಂಬರ್ 30 ರಂದುನಗರದ ಡೊಂಗರಕೇರಿ ವೆಂಕಟರಮಣ ದೇವಾಲಯದಲ್ಲಿ ಧರ್ಮಾಗ್ರಹ ಸಭೆ ಆಯೋಜನೆ ಮಾಡಲಾಗಿದೆ ಎಂದು ವಿಹೆಚ್‌ಪಿ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವನಂದ್ ಮೆಂಡನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಡೊಂಗರಕೇರಿ ವೆಂಕಟರಮಣ ದೇವಾಲಯದಲ್ಲಿ ನಡೆಯುವ ಧರ್ಮಾಗ್ರಹ ಸಭೆ ಮೂಲಕ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಂಧ್ರ ಸಿಎಂ ಪತ್ರ ಬರೆಯಲು ಒತ್ತಾಯ ಮಾಡಲಾಗುವುದು. ಜೊತೆಗೆ ದೇವಾಲಯದಲ್ಲಿ ಸಮೂಹಿಕ ಸಂಕೀರ್ತಣೆ ಆಯೋಜಿಸಲಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ ಎಲ್ಲಾ ಮಠ ಮಂದಿರದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಾಗಿ ಕರೆ ಕೊಡಲಾಗುವುದು ಎಂದ ಅವರು ಅನ್ಯಮತೀಯರ ಆಡಳಿತದಿಂದ ಈ ರೀತಿಯ ಕೃತ್ಯ ಆಗ್ತಾ ಇದೆ. ಈ ಬಗ್ಗೆ ದೇವರಲ್ಲಿ ಅವರಿಗೆ ಒಳ್ಳೆಯ ಬುದ್ದಿ ಕೊಡುವಂತೆ ಪ್ರಾರ್ಥನೆ ಮಾಡುತ್ತಿದ್ದೇವೆ. ಅನ್ಯಮತೀಯರ ಪೂಜಾ ಕೇಂದ್ರ ಅವರ ಧರ್ಮದವರ ಕೈಯಲ್ಲೇ ಇದ್ದರೆ ದೇವಾಲಯಗಳು ಮಾತ್ರ ಇತರರು ಆಡಳಿತ ಮಾಡ್ತಾ ಇದ್ದಾರೆ. ಇದು ಸರಿಯಲ್ಲ ಆದ್ದರಿಂದ ಇದರ ಬಗ್ಗೆ ಧ್ವನಿ ಎತ್ತಲಿದ್ದೇವೆ ಎಂದು ಮಾಹಿತಿ ನೀಡಿದರು.
You must be logged in to post a comment Login