LATEST NEWS
ಮಂಗಳೂರು ಚಲೋ : ಪೊಲೀಸ್ ಸೇರಿದಂತೆ ಹಲವರಿಗೆ ಗಾಯ

ಮಂಗಳೂರು ಸೆಪ್ಟೆಂಬರ್ 7: ಪೊಲೀಸ್ ಇಲಾಖೆಯ ನಿರ್ಬಂಧಕಾಜ್ಞೆ ಯ ನಡುವೆಯೂ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಪ್ರತಿಭಟನಾ ಜಾಥಾ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಜಟಾಪಟಿಗೆ ವೇದಿಕೆಯಾಯಿತು.
ನಗರದ ಜ್ಯೋತಿ ವೃತ್ತದ ಬಳಿ ಪ್ರತಿಭಟನಾ ಸಭೆ ಬಳಿಕ ಬೈಕ್ ಜಾಥಾ ಸೇರಿದಂತೆ ಪಾದಯಾತ್ರೆ ನಡೆಸಲು ಮುಂದಾದ ಸಹಸ್ರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು .
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ನೂಕಾಟ ತಳ್ಳಾಟ ದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಪೊಲೀಸರಿಗೆ ಗಾಯಗಳಾಗಿದೆ.
ಡಿವೈಎಸ್ಪಿ Rank ನ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನ ಪೊಲೀಸ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಗಾಯಗೊಂಡು ಅವರು ಆಸ್ಪತ್ರೆಗೆ ಚಿಕಿತ್ಸೆ ಪಡೆದು ತೆರಳಿದ್ದಾರೆ .
