KARNATAKA
ಮಂಗಳೂರು : ಸುರತ್ಕಲಿನಲ್ಲಿ ಮನೆ ಕಸ ಸಂಗ್ರಹಿಸುವ ಕಾರ್ಮಿಕನ ಮೇಲೆ ಹಲ್ಲೆ, ಭಾನುವಾರ ಮಂಗಳೂರಿನಲ್ಲಿ ಕಸ ಸಂಗ್ರಹ ಸ್ಥಗಿತ ..!
ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕನ ಮೇಲೆ ಸ್ಥಳಿಯ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಹೊರವಲಯದ ಸುರತ್ಕಲ್ ಸದಾಶಿವ ನಗರ ವಾರ್ಡ್ ನಂಬ್ರ 2 ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮಂಗಳೂರು : ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕನ ಮೇಲೆ ಸ್ಥಳಿಯ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಹೊರವಲಯದ ಸುರತ್ಕಲ್ ಸದಾಶಿವ ನಗರ ವಾರ್ಡ್ ನಂಬ್ರ 2 ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಹಲ್ಲೆಗೊಳಗಾದ ಕಾರ್ಮಿಕ ರಾಜು ಎಂದು ಗುರುತ್ತಿಸಲಾಗಿದ್ದು ನಗರದ ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಿಸುವ ಗುತ್ತಿಗೆ ಕಾರ್ಮಿಕರಿಗೆ ನಿರಂತರ ಹಲ್ಲೆಗಳು, ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ ಭಾನುವಾರ ಮಂಗಳೂರು ನಗರದಾದ್ಯಂತ ಕಸ ವಿಲೇ ಸ್ಥಗಿತ ಮಾಡಲು ಪೌರ ಕಾರ್ಮಿಕರು ನಿರ್ಧರಿಸಿದ್ದಾರೆ. ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಯ ಬಗ್ಗೆ ಮಂಗಳೂರು ಸಫಾಯಿ ಕರ್ಮಚಾರಿ ಯೂನಿಯನ್ ತೀವೃ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಯೂನಿಯನ್ ಉಪಾಧ್ಯಕ್ಷ ಸುಧೀರ್ ಕುಲಾಲ್ ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕರ ಮೇಲೆ ನಿರಂತರ ಹಲ್ಲೆ , ಕಿರುಕುಳಗಳು ನಡೆಯುತ್ತಿದ್ದು ಇದನ್ನು ಸಂಘ ಖಂಡಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು ನಗರದಾದ್ಯಂತ ಕಸ ಸಂಗ್ರಹ ಸ್ಥಗಿತ ಮಾಡಲು ನಿರ್ಧರಿದ್ದೇವೆ. ಇಂತಹ ಘಟನೆಗಳು ಮುಂದುವರೆಯದಂತೆ ಕ್ರಮ ವಹಿಸಿ ಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ.