LATEST NEWS
ತಿರುಗಿಬಿದ್ದ ಇಸ್ರೇಲ್ – ಪ್ರತಿದಾಳಿಯಲ್ಲಿ ಗಾಜಾದಲ್ಲಿ 200ಕ್ಕೂ ಅಧಿಕ ಮಂದಿ ಸಾವು…!!
ಇಸ್ರೆಲ್ ಅಕ್ಟೋಬರ್ 07: ಇಸ್ರೇಲ್ ಮೇಲೆ ಗಾಜಾಪಟ್ಟಿಯ ಹಮಾಸ್ ಉಗ್ರರು ನಡೆಸಿದ ಹಠಾತ್ ದಾಳಿಯಲ್ಲಿ ಇಸ್ರೆಲ್ ನ 40 ಜನ ಪ್ರಜೆಗಳು ಸಾವನಪ್ಪಿದ ಬೆನ್ನಲ್ಲೇ ಇದೀಗ ಇಸ್ರೇಲ್ ತಿರುಗೇಟು ನೀಡಿದ್ದು, ಈಗಾಗಲೇ ಪ್ರತಿದಾಳಿಗೆ ಗಾಜಾದ ಪ್ಯಾಲೆಸ್ತೀನ್ ನಲ್ಲಿ 200ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ.
ಆಲ್ ಜಜೀರಾ ವರದಿ ಪ್ರಕಾರ ಇಸ್ರೇಲ್‌ನ ಪ್ರತೀಕಾರದ ದಾಳಿ.ಲ್ಲಿ ಗಾಜಾದ ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಲ್ಲಿ ಕನಿಷ್ಠ 198 ಜನರು ಸಾವನ್ನಪ್ಪಿದ್ದಾರೆ ಮತ್ತು 1,610 ಜನರು ಗಾಯಗೊಂಡಿದ್ದಾರೆ. ಶನಿವಾರ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳ ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇಂದು ಗಾಜಾದ ಮೇಲೆ ತನ್ನ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಬಿಬಿಸಿ ವರದಿ ಪ್ರಕಾರ ಇಸ್ರೇಲಿ ವೈಮಾನಿಕ ದಾಳಿಯಲ್ಲಿ 161 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1,000 ಜನರು ಗಾಯಗೊಂಡಿದ್ದಾರೆ.
ಈಗಾಗಲೇ ಹಮಾಸ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಯುದ್ದ ಪ್ರಾರಂಭವಾಗಿದೆ ಎಂದು ಇಸ್ರೇಲ್ ನ ಪ್ರಧಾನಮಂತ್ರಿ ಹೇಳಿದ್ದಾರೆ. “ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ” ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟೆಲ್ ಅವೀವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಿಂದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಈಗಾಗಲೇ ಡಜನ್‌ಗಟ್ಟಲೆ ಇಸ್ರೇಲಿ ಫೈಟರ್ ಜೆಟ್‌ಗಳು ಪ್ರಸ್ತುತ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಹಲವಾರು ಗುರಿಗಳ ಮೇಲೆ ದಾಳಿ ಮಾಡುತ್ತಿವೆ” ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.