DAKSHINA KANNADA
ಮಂಗಳೂರು : ಅ.6,7 ರಂದು ಮೂಡುಬಿದಿರೆಯಲ್ಲಿ ‘ಆಳ್ವಾಸ್ ಪ್ರಗತಿ 2023’ ಉದ್ಯೋಗ ಮೇಳ..

ರಾಜ್ಯದ ಪ್ರತಿಷ್ಟಿತ ವಿದ್ಯಾಸಂಸ್ಥೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ಮೂಡುಬಿದಿರೆ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ಆಳ್ವಾಸ್ ಪ್ರಗತಿ-2023 ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.
ಮಂಗಳೂರು: ರಾಜ್ಯದ ಪ್ರತಿಷ್ಟಿತ ವಿದ್ಯಾಸಂಸ್ಥೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ಮೂಡುಬಿದಿರೆ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ಆಳ್ವಾಸ್ ಪ್ರಗತಿ-2023 ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.

ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ ನೀಡಿದರು.
ಪ್ರತಿಷ್ಠಾನದ ಸಾಮಾಜಿಕ ಜವಾಬ್ದಾರಿ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಮತ್ತು ಹಿಂದುಳಿದ ವಲಯದ ಪ್ರತಿಭಾನ್ವಿತ ಆಕಾಂಕ್ಷಿಗಳಿಗೆ ಉಚಿತವಾಗಿ ಔದ್ಯೋಗಿಕ ನೆರವನ್ನು ನೀಡಲು ಈ ಮೇಳವನ್ನು ಆಯೋಜಿಸಲಾಗುತ್ತಿದೆ.
ಈ 13 ನೇ ಆವೃತಿಯಲ್ಲಿ ಅತ್ಯುನ್ನತ ಉದ್ಯೋಗದಾತ ವಲಯಗಳಾದ ಬಿಎಫ್ಎಸ್‌ಐ, ಐಟಿ, ಉತ್ಪಾದನಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಟೆಲಿ ಕಮ್ಯುನಿಕೇಶನ್ಸ್ ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ ಮತ್ತು ಸರಕಾರೇತರ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದರು.
ಪದವಿ, ಸ್ನಾತಕೋತ್ತರ ಪದವಿಗಳಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಇಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲವಿಜ್ಞಾನ, ನರ್ಸಿಂಗ್, ಐಟಿಐ ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ, ಎಸೆಸೆಲ್ಸಿ, ಇತರ ಅರ್ಹ ಆಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿಸಬಹುದು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವವರ ಹಾಗೂ ಇತರ ಮಾಹಿತಿಗಳನ್ನು ವೆಬ್‌ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗುವುದು. ಮತ್ತು ಭಾಗವಹಿಸುವ ಎಲ್ಲಾ ಉದ್ಯೋಗಾಕಾಂಕ್ಷಿಗಳು ಇದೇ ವೈಬ್‌ಸೈಟ್‌ನ http://alvaspragati.com/candidateRegistrationPage ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಈ ಬಾರಿ 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿದ್ದು, ಈಗಾಗಲೇ 112 ಕಂಪೆನಿಗಳು ನೋಂದಾಯಿಸಿಕೊಂಡಿವೆ. ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅ.5ರಿಂದ ವಸತಿ ವ್ಯವಸ್ಥೆ ಮತ್ತು ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯವಿದೆ.
ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳು 5-10 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಸ್ವ ವಿವರದ ಮಾಹಿತಿ, ಆನ್‌ಲೈನ್ ನೋಂದಣಿ ನಂಬರ್ ಹೊಂದಿರಬೇಕು. ಅ.6ರಂದು ಬೆಳಗ್ಗೆ 8 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಾಜರಿರಬೇಕು ಎಂದರು.
ಐಸಿಐಸಿಐ, ಆ್ಯಕ್ಸಿಸ್ ಇಂಡಸ್ ಇಂಡ್ ಸಹಿತ ವಿವಿಧ ಬ್ಯಾಂಕ್‌ಗಳು, ವೋಲ್ವೊ ಏಸ್ ಡಿಸೈನರ್, ಸನ್ಸೆರಾ ಎಂಜಿನಿಯರಿಂಗ್ ಮೊದಲಾದ ಉತ್ಪಾದನಾ ವಲಯದ ಕಂಪೆನಿಗಳು, ಗಲ್ಫ್ ಬಹುರಾಷ್ಟ್ರೀಯ ಕಂಪೆನಿಗಳು, ಟೊಯೊಟಾ ಇಂಡಸ್ಟ್ರೀಸ್, ವೋಲ್ವೊ ಟ್ರಕ್ಸ್, ಸನ್‌ಎಲೆಕ್ಟ್ರಿಕ್, ಉಷಾ ಆರ್ವೌರ್, ಕೈಯನ್ಸ್ ಟೆಕ್ನಾಲಜಿ, ಟಿವಿಎಸ್ ಮೋಟಾರ್ಸ್, ಫ್ಲಿಪ್ಕಾರ್ಟ್, ಅಮೆಜಾನ್, ದಿಯಾ ಸಿಸ್ಟಮ್ಸ್, ಆಂಥೆಮ್ ಬಯೋಸೈನ್ಸ್, ಎಂಎಸೆನ್ ಲ್ಯಾಬ್ಸ್, ಕೆಎಂಸಿ ಆಸ್ಪತ್ರೆ, ಎ.ಜೆ.ಆಸ್ಪತ್ರೆ, ಅಪೋಲೊ ಹೋಮ್ ಹೆಲ್ತ್ ಕೇರ್, ಲ್ಯಾಂಡ್ ಮಾರ್ಕ್ ಗ್ರೂಪ್, ಆಲೆಂಬಿಕ್ ಫಾರ್ಮಸುಟಿಕಲ್ಸ್ ,ನಂದಿ ಟೊಯೊಟಾ, ಮಹೀಂದ್ರಾ, ಮಾಂಡೋವಿ ಮೋಟರ್ಸ್, ದೇಶಪಾಂಡೆ ೌಂಡೇಶನ್, ಗೋವನ್ ಇನ್‌ಸ್ಟಿಟ್ಯೂಟ್ ಕೊಚ್ಚಿನ್ ಮೊದಲಾದ ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಉದ್ಯೋಗ ಮತ್ತು ತರಬೇತಿ ವಿಭಾಗ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಪ್ರಸಾದ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.