Connect with us

  LATEST NEWS

  ಉಡುಪಿ : OLX ನಲ್ಲಿ ಸೊತ್ತು ಮಾರಾಟಕ್ಕಿಟ್ಟ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ..!

  ಒಎಲ್‌ಎಕ್ಸ್‌ನಲ್ಲಿ ಸೊತ್ತು ಮಾರಾಟಕ್ಕಿಟ್ಟಿದ್ದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

  ಉಡುಪಿ: ಒಎಲ್‌ಎಕ್ಸ್‌ನಲ್ಲಿ ಸೊತ್ತು ಮಾರಾಟಕ್ಕಿಟ್ಟಿದ್ದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

  ಸೊತ್ತುಗಳನ್ನು ಖರೀದಿಸುವ ನೆಪದಲ್ಲಿ ವಂಚಕರು ಮಹಿಳೆಯ ಬ್ಯಾಂಕ್‌ ಖಾತೆಯಿಂದಲೇ ಹಣ ಎಗರಿಸಿದ್ದಾರೆ.

  ಉಷಾ ಎಂಬ ಮಹಿಳೆ ಒಎಲ್‌ಎಕ್ಸ್‌ನಲ್ಲಿ ತಮ್ಮಲ್ಲಿದ್ದ ಸೊತ್ತುಗಳ ಮಾರಾಟದ ಜಾಹೀರಾತು ಪ್ರಕಟಿಸಿದ್ದರು.

  ಇದನ್ನು ನೋಡಿದ ವಂಚಕನೊಬ್ಬ ಮಹಿಳೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದ.

  ಬಳಿಕ ಮಹಿಳೆಯೊಬ್ಬಳು ಕರೆ ಮಾಡಿ ಉಷಾ ಕಿರಣ್ ಜತೆ ಮಾತನಾಡಿ ಸೊತ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದಳು.

  ತನ್ನಲ್ಲಿ ನಗದು ಹಣವಿಲ್ಲ ಗೂಗಲ್ ಪೇ ಮಾಡುವುದಾಗಿ ತಿಳಿಸಿ 2 ಗಂಟೆಯ ಬಳಿಕ ಮಹಿಳೆಯ ಮೊಬೈಲ್‌ಗೆ ಹಲವು ಕ್ಯೂಆರ್ ಕೋಡ್‌ಗಳನ್ನು ಕಳುಹಿಸಿದ್ದಾಳೆ.

  ಇದಾದ ಬಳಿಕ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ.

  ಒಟ್ಟು ಬರೋಬ್ಬರಿ  1,28,496 ರೂ. ಮಹಿಳೆ ಕಳೆದುಕೊಂಡಿದ್ಎಂದುದು ತಿಳಿದುಬಂದಿದೆ. ಈ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply