Connect with us

    LATEST NEWS

    ಡ್ರಗ್ ಮಾಫಿಯಾದ ವಿರುದ್ದ ಮಂಗಳೂರು ಪೊಲೀಸರ ಮುಂದುವರೆದ ಸಮರ- 1.25ಲಕ್ಷದ MDMA ವಶ

    ಯುವ ಜನರ ಬದುಕನ್ನೆ ಕಸಿಯುತ್ತಿರುವ ಸಾಮಾಜಿಕ ಪಿಡುಗಾಗಿರುವ ಡ್ರಗ್ಸ್‌ ಮಾಫಿಯಾದ ವಿರುದ್ದ ಮಂಗಳೂರು ಪೊಲೀಸರ ಸಮರ ಮುಂದುವರೆದಿದೆ.

    ಮಂಗಳೂರು : ಯುವ ಜನರ ಬದುಕನ್ನೆ ಕಸಿಯುತ್ತಿರುವ ಸಾಮಾಜಿಕ ಪಿಡುಗಾಗಿರುವ ಡ್ರಗ್ಸ್‌ ಮಾಫಿಯಾದ ವಿರುದ್ದ ಮಂಗಳೂರು ಪೊಲೀಸರ ಸಮರ ಮುಂದುವರೆದಿದೆ. ಇಂದು ನಿಷೇಧಿತ ಮಾದಕ ಪದಾರ್ಥ ಹೊಂದಿದ್ದ ವ್ಯಕ್ತಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ .

    ನಗರದ ಕಾಲೋಜುವೊಂದರ ಪದವಿ ವಿದ್ಯಾರ್ಥಿಯಾಗಿರುವ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಲುಕುಮಾನುಲ್ ಹಕೀಂ (22) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 1 ಲಕ್ಷ 25 ಸಾವಿರ ಮೌಲ್ಯದ 25 ಗ್ರಾಂ‌ಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 1 ಲಕ್ಷ 60 ಸಾವಿರ ಮೌಲ್ಯದ ವಸ್ತುಗಳನ್ನು ಕೂಡ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತನಿಂದ 1,25 ಲಕ್ಷ ರೂಪಾಯಿ ಮೌಲ್ಯದ 25 ಗ್ರಾಂ MDMA ಪದಾರ್ಥವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply