LATEST NEWS
ಬಿಜೆಪಿ ಮುಖಂಡ ಶಾನವಾಜ್ ಹುಸೇನ್ ಗೆ ಹೃದಯಾಘಾತ – ಆಸ್ಪತ್ರೆಗೆ ದಾಖಲು
ಮುಂಬೈ ಸೆಪ್ಟೆಂಬರ್ 26: ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಶಾನವಾಜ್ ಹುಸೇನ್ ಗೆ ಹೃದಯಾಘಾತವಾಗಿದ್ದು ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಮುಂಬೈ ಬಿಜೆಪಿ ಅಧ್ಯಕ್ಷ ಮತ್ತು ಬಾಂದ್ರಾ ಶಾಸಕ ಆಶಿಶ್ ಶೆಲಾರ್ ಅವರ ಮನೆಯಲ್ಲಿ ಶಾನವಾಜ್ ಹುಸೇನ್ ಹಾಜರಿದ್ದರು. ಈ ವೇಳೆ ಅವರ ಆರೋಗ್ಯ ಹದಗೆಟ್ಟಿತು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶಹನವಾಜ್ ಹುಸೇನ್ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಡಾ.ಜಲೀಲ್ ಪರ್ಕರ್ ತಿಳಿಸಿದ್ದಾರೆ. ಸದ್ಯ ಅವರು ಐಸಿಯುನಲ್ಲಿದ್ದಾರೆ, ಶೀಘ್ರದಲ್ಲೇ ಅವರನ್ನು ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಹುಸೇನ್ ಬಿಹಾರದ ಪ್ರಮುಖ ಬಿಜೆಪಿ ವ್ಯಕ್ತಿಯಾಗಿದ್ದು, ಈ ಹಿಂದೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬಿಹಾರ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ, ಅವರು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರಾಗಿ, ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಕಲ್ಲಿದ್ದಲು ಸಚಿವ, ನಾಗರಿಕ ವಿಮಾನಯಾನ ಸಚಿವ ಮತ್ತು ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರು.
You must be logged in to post a comment Login