LATEST NEWS
ಮಂಗಳೂರು-ಕಾಸರಗೋಡು ಗಡಿಯ ತಲಪಾಡಿಯಲ್ಲಿ ವಾಹನ ಸಂಚಾರ ಬಂದ್
ಮಂಗಳೂರು-ಕಾಸರಗೋಡು ಗಡಿಯ ತಲಪಾಡಿಯಲ್ಲಿ ವಾಹನ ಸಂಚಾರ ಬಂದ್
ಮಂಗಳೂರು ಮಾರ್ಚ್ 21: ಕೇರಳದಲ್ಲಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯ ಕೇರಳದಿಂದ ದಕ್ಷಿಣಕನ್ನಡ ಜಿಲ್ಲೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಬಂದ್ ಮಾಡಿದೆ.
ಕೇರಳ ಮತ್ತು ದಕ್ಷಿಣ ಕನ್ನಡಕ್ಕೆ ಒಟ್ಟು 17 ದಾರಿಗಳಿದ್ದು ಇವುಗಳಲ್ಲಿ 16 ದಾರಿಗಳನ್ನು ಇಂದಿನಿಂದಲೇ ಮಾರ್ಚ್ 31ರ ಮಧ್ಯರಾತ್ರಿ 12 ಗಂಟೆಯವರೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅನಿವಾರ್ಯವಾಗಿ ತುರ್ತು ಪ್ರಕರಣಗಳಲ್ಲಿ ಸಂಪೂರ್ಣವಾಗಿ ತಪಾಸಣೆ ಗೊಳಪಡಿಸಿದ ಬಳಿಕವೇ ಜನರನ್ನು ಬಿಡಲಾಗುವುದು ಅಲ್ಲದೆ ತುರ್ತು ಅವಶ್ಯಕ ಸಾಮಗ್ರಿಗಳ ವಾಹನಗಳಿಗೆ ತಲಪಾಡಿ ರಸ್ತೆಯಿಂದ ಸಂಚರಿಸಲು ಅವಕಾಶ ನೀಡುವಂತೆ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ.
ಈ ಹಿನ್ನಲೆಯಲ್ಲಿ ಮಂಗಳೂರು-ಕಾಸರಗೋಡು ಗಡಿಯ ತಲಪಾಡಿಯಲ್ಲಿ ವಾಹನ ಸಂಚಾರವನ್ನು ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ಬಂದ್ ಮಾಡಲಾಗಿದೆ. ರಸ್ತೆ ಬಂದ್ ಮಾಡಲು ಬ್ಯಾರಿಕೇಡ್ ನ್ನು ಪೊಲೀಸರು ಆಳವಡಿಸಿದ್ದಾರೆ.