Connect with us

LATEST NEWS

ಮಂಗಳೂರು – ಬೆಂಕಿಯಲ್ಲಿ ಸುಟ್ಟು ಭಸ್ಮವಾದ ಗುಜರಿ ಸಾಮಾಗ್ರಿ ಯಾರ್ಡ್

ಮಂಗಳೂರು ಜನವರಿ 27: ನಗರದ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿಯ ಚಿಂತನೆ ಬಳಿ ಗುಜರಿ ವಸ್ತುಗಳ ಸಂಗ್ರಹ ಯಾರ್ಡ್‌ನಲ್ಲಿ ನಿನ್ನೆ ರಾತ್ರಿ 11.30 ಆಕಸ್ಮಿಕ ಬೆಂಕಿ ಹತ್ತಿಕೊಂಡಿದ್ದು, ಗುಜರಿ ಸಂಗ್ರಹ ಗೋಡಾನ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.


ಈ ಗೋದಾಮಿನಲ್ಲಿ ಗುಜರಿ ಸಾಮಗ್ರಿಗಳು, ಸೆಕೆಂಡ್ ಹ್ಯಾಂಡ್ ಪೀಠೋಪಕರಣ ಸಹಿತ ನಾನಾ ಸಾಮಗ್ರಿಗಳನ್ನು ತುಂಬಿಸಿಡಲಾಗಿತ್ತು. ರವಿವಾರ ರಾತ್ರಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಗೋದಾಮಿನಲ್ಲಿದ್ದ ಸಾಮಗ್ರಿಗಳು ಸುಟ್ಟುಕರಕಲಾಗಿದೆ. ಪಕ್ಕದ ಮನೆಗೂ ಸ್ವಲ್ಪ ಹಾನಿಯಾಗಿದ್ದು, ತಕ್ಷಣವೇ ಪಾಂಡೇಶ್ವರ, ಕದ್ರಿ, ಬಂಟ್ವಾಳದ ಅಗ್ನಿಶಾಮಕ ದಳದ ಹಾಗೂ ಎಂಸಿಎಫ್ ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆ. ತಡರಾತ್ರಿ ಆರಂಭಗೊಂಡ ಬೆಂಕಿ ನಂದಿಸುವ ಕಾರ್ಯಾಚರಣೆಯು ಮುಂಜಾನೆ 5ರವರೆಗೂ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಅರಿತ ಶಾಸಕ ವೇದವ್ಯಾಸ ಕಾಮತ್ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ವ್ಯವಸ್ಥೆ ಮಾಡಿಸಿದ್ದರು. ಪಾಂಡೇಶ್ವರ ಅಗ್ನಿ ಶಾಮಕ ದಳದ ಸುಮಾರು 6ರಷ್ಟು ಅಗ್ನಿಶಾಮಕ ವಾಹನಗಳು,ನೀರಿನ ಟ್ಯಾಂಕರ್, ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಜೊತೆಗೆ ಸ್ಥಳೀಯ ಕಾರ್ಪೊರೇಟರ್‌ಗಳಾದ ಶೈಲೇಶ್ ಶೆಟ್ಟಿ,ವೀಣಮಂಗಳ, ಭರತ್ ಕುಮಾರ್ ಎಸ್ ಬೆಂಕಿ ನಂದಿಸುವವರೆಗೆ ಮಧ್ಯರಾತ್ರಿ 2.30 ಸ್ಥಳದಲ್ಲಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *