LATEST NEWS
ಉಗ್ರ ಸಂಘಟನೆ ಐಸಿಸ್ ಜೊತೆ ನಂಟು – ಉಳ್ಳಾಲದಲ್ಲಿ ಮಹಿಳೆಯೊಬ್ಬರು ಎನ್ಐಎ ವಶಕ್ಕೆ

ಮಂಗಳೂರು ಜನವರಿ 03: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆಗೆ ಮತ್ತೆ ಎನ್ ಐಎ ದಾಳಿ ನಡೆಸಿದ್ದು. ಉಗ್ರ ಸಂಘಟನೆ ಐಸಿಸ್ ಜೊತೆ ನಂಟಿನ ಶಂಕೆ ಮೇಲೆ ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ.ಭಾಷಾ ಸೊಸೆ ದೀಪ್ತಿ ಆಲಿಯಾಸ್ ಮರಿಯಂ ಎನ್ ಐಎ ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆಯಲ್ಲಿ ಅವರನ್ನು ವಶಕ್ಕೆ ಪಡೆದ ಎನ್ಐಎ, ಬಳಿಕ ಮಂಗಳೂರಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ನೇರವಾಗಿ ದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಈ ಹಿಂದೆ ಅಗಸ್ಟ್ 4ರಂದು ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು, ಅಂದು ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಬಂಧಿಸಿದ್ದರು, ಈ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆ ಅನುಮಾನ ಬಂದಿತ್ತು. ಆದರೆ ಸಣ್ಣ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿ ಬಿಟ್ಟಿದ್ದ ಎನ್ ಐಎ. ಇದೀಗ ಮತ್ತೆ ಮನೆಗೆ ಎನ್ ಐಎ ದಾಳಿ ನಡೆಸಿ ದೀಪ್ತಿ ಆಲಿಯಾಸ್ ಮರಿಯಂ ಬಂಧಿಸಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವಳಾದ ದೀಪ್ತಿ ಮರಿಯಂ ಅವರು ಅನಾಸ್ ಅವರನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದರು.