LATEST NEWS
ವಿಜೃಂಭಣೆಯ ಮಂಗಳೂರು ದಸರಾ ಶೋಭಾಯಾತ್ರೆ

ವಿಜೃಂಭಣೆಯ ಮಂಗಳೂರು ದಸರಾ ಶೋಭಾಯಾತ್ರೆ
ಮಂಗಳೂರು ಸೆಪ್ಟೆಂಬರ್ 30: ವಿಜೃಂಭಣೆಯ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ. ಮಂಗಳೂರು ದಸರಾ ಮಹೋತ್ಸವದ ಕೊನೆಯ ದಿನವಾದ ಇಂದು ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಶಾರದಾದೇವಿ ಸೇರಿದಂತೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರ ಶೋಭಾಯಾತ್ರೆ ನಡೆಯಿತು.
ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಲಂಕೃತ ನವದುರ್ಗೆಯರ ಮಂಟಪ ಮೆರವಣಿಗೆಯೊಂದಿಗೆ 40 ಕ್ಕೂ ಹೆಚ್ಚು ಟ್ಯಾಬ್ಲೋಗಳು ಸೇರಿದಂತೆ ರಾಜ್ಯದ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಜನಪದ ಕಲಾ ಮೇಳಗಳು ಶೋಭಾಯಾತ್ರೆಗೆ ಮೆರುಗು ತುಂಬಿದವು.

ಇಂದು ಸಂಜೆ ಆರಂಭಗೊಂಡ ಶೋಭಾಯಾತ್ರೆ ನಗರದ ರಾಜ ರಸ್ತೆಯಲ್ಲಿ ಒಂಬತ್ತು ಕಿಲೋಮೀಟರ್ ಸಾಗಿ ನಾಳೆ ಮುಂಜಾನೆ ಕೊನೆಗೊಳ್ಳಲಿದೆ. ನಾಳೆ ಮುಂಜಾನೆ ಶಾರದಾದೇವಿ ಸೇರಿದಂತೆ ನವದುರ್ಗೆಯರ ಒಟ್ಟು 14 ಮೂರ್ತಿಗಳನ್ನು ಕುದ್ರೋಳಿಯ ಪುಷ್ಕರಣಿಯಲ್ಲಿ ವಿಸರ್ಜನೆಯೊಂದಿಗೆ ಶೋಭಾ ಯಾತ್ರೆ ಕೊನೆಗೊಳ್ಳಲಿದೆ.