Connect with us

  LATEST NEWS

  ಮಂಗಳೂರು ದಸರಾ ಶಾರದಾ ಮಾತೆ ವಿಸರ್ಜನೆ

  ಮಂಗಳೂರು ದಸರಾ ಶಾರದಾ ಮಾತೆ ವಿಸರ್ಜನೆ

  ಮಂಗಳೂರು ಅಕ್ಟೋಬರ್ 1: ಮಂಗಳೂರು ದಸರಾ ಮೆರವಣಿಗೆ ಇಂದು ಮುಂಜಾವ ಕೊನೆಗೊಂಡಿತು. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕಲ್ಯಾಣಿಯಲ್ಲಿ ಶಾರದಾಮಾತೆ ಮತ್ತು ನವದುರ್ಗೆಯರ ವಿಸರ್ಜನಾ ಕಾರ್ಯ ಇಂದು ಬೆಳಗ್ಗೆ ನಡೆಯಿತು.

  ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ  ದೇವಾಲಯದಿಂದ ಹೊರಟಿದ್ದ ವೈಭವದ ಶೋಭಾಯತ್ರೆ ,ಶಾರದಾದೇವಿ ಸೇರಿದಂತೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರ ಹಾಗು  ಗಣಪತಿ ಮೂರ್ತಿಯ ವಿಸರ್ಜನೆಯೊಂದಿಗೆ ಕೊನೆಗೊಂಡಿದೆ.

  ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದ್ದಾರು. ಅಲಂಕೃತ ನವದುರ್ಗೆಯರ ಮಂಟಪ ಮೆರವಣಿಗೆಯೊಂದಿಗೆ 50 ಕ್ಕೂ ಹೆಚ್ಚು ಟ್ಯಾಬ್ಲೋಗಳು ಸೇರಿದಂತೆ ರಾಜ್ಯದ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಜನಪದ ಕಲಾ ಮೇಳಗಳು ಶೋಭಾಯಾತ್ರೆಗೆ ಮೆರುಗು ತುಂಬಿದ್ದವು. ಸುಮಾರು ಒಂಬತ್ತು ಕಿಲೋ ಮೀಟರ್ ಉದ್ದದ ಶೋಭಾ ಯಾತ್ರೆ ಸಮಾರೋಪಕ್ಕೆ ಬಣ್ಣದ ಮೆರುಗನ್ನು ನೀಡಿತ್ತು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಲಕ್ಷಾಂತರ ಜನರು, ದಾರಿಯ ಎರಡೂ ಬದಿಗಳಲ್ಲಿ ನಿಂತು ಶಾರದ ಮಾತೆ ಸಹಿತ ಇತರ ವರ್ಣರಂಜಿತಾ ನವದುರ್ಗೆಯರು, ಟ್ಯಾಬ್ಲೋಗಳನ್ನು ನೋಡಿ ಕಣ್ಣುಗಳನ್ನು ತುಂಬಿಕೊಂಡರು.

  ಸಂಜೆ  ಸುಮಾರು 4 ಗಂಟೆಗೆ ಆರಂಭಗೊಂಡದ್ದ ಶೋಭಾಯಾತ್ರೆ ನಗರದ ರಾಜ ರಸ್ತೆಯಲ್ಲಿ 9 ಕಿಲೋಮೀಟರ್ ಸಾಗಿ ಇಂದು ಮುಂಜಾನೆ ಕೊನೆಗೊಂಡಿದೆ. ಕುದ್ರೋಳಿ ಕ್ಷೇತ್ರದಿಂದ ಹೊರಟ ಮೆರವಣಿಗೆ ಮಣ್ಣಗುಡ್ಡ ,ಲೇಡಿಹಿಲ್ ಸರ್ಕಲ್, ಲಾಲ್ ಬಾಗ್ , ಪಿ ವಿ ಎಸ್ ಸರ್ಕಲ್ , ನವಭಾರತ್ ಸರ್ಕಲ್ , ಕೆ ಎಸ್ ರಾವ್ ರಸ್ತೆ ,ಹಂಪನಕಟ್ಟೆ ,ಗಣಪತಿ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕಟರಮಣ ದೇಗುಲದ ಮುಂಭಾಗದಿಂದ ಕಾರ್ ಸ್ಟ್ರೀಟ್ , ಅಳಕ್ಕೆ ಮಾರ್ಗವಾಗಿದ  ಮೆರವಣಿಗೆ ಶ್ರೀ ಕ್ಷೇತ್ರ ಕುದ್ರೋಳಿಯ ಪುಷ್ಕರಣಿಯಲ್ಲಿ ಕೊನೆಗೊಂಡಿದೆ.

  ಇಂದು ಮುಂಜಾನೆ ಶಾರದಾದೇವಿ ಸೇರಿದಂತೆ ನವದುರ್ಗೆಯರ ಒಟ್ಟು 14 ಮೂರ್ತಿಗಳನ್ನು ಕುದ್ರೋಳಿಯ ಪುಷ್ಕರಣಿಯಲ್ಲಿ ವಿಸರ್ಜನೆಯೊಂದಿಗೆ ಶೋಭಾ ಯಾತ್ರೆ ಕೊನೆಗೊಂಡಿದೆ.

  ವಿಡಿಯೋಗಾಗಿ…

   

  ಶೋಭಾಯಾತ್ರೆಯ ಕ್ಲಿಕ್ಸ್

   

   

  Share Information
  Advertisement
  Click to comment

  You must be logged in to post a comment Login

  Leave a Reply