LATEST NEWS
ಮಂಗಳೂರು : BSC ಕಲಿಕೆಯ ವಿದ್ಯಾರ್ಥಿನಿ ಮೆಹರ್ ಬಾನು Missing..!

ಮಂಗಳೂರು: ಮಂಗಳೂರಿನಲ್ಲಿ BSC ಕಲಿಕೆಯ ವಿದ್ಯಾರ್ಥಿನಿಯೋರ್ವಳು ಕಾಣೆಯಾಗಿದ್ದಾಳೆ. ನಗರದ ಬೋಳಾರ ಎಮ್ಮೆಕೆರೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಮೆಹರ್ ಬಾನು (18) ಕಾಣೆಯಾಗಿದ್ದ ಯುವತಿಯಾಗಿದ್ದಾಳೆ.

ಮಂಗಳೂರಿನ ಕೊಡಿಯಾಲ್ ಬೈಲ್‌ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ಮೆಹರ್ ಬಾನು ಕಳೆದ 10 ದಿನಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದಳು. ಅಕ್ಟೋಬರ್ 24ರಂದು ಸಂಜೆ 4 ಗಂಟೆಗೆ ತಾಯಿ ಹೊರಗೆ ಹೋಗಿದ್ದು 6 ಗಂಟೆಗೆ ವಾಪಸು ಬಂದು ನೋಡಿದಾಗ ಮಗಳು ಮೆಹರ್ ಬಾನು ಮನೆಯಲ್ಲಿ ಇರಲಿಲ್ಲ.
ಈ ಬಗ್ಗೆ ಎಲ್ಲ ಕಡೆ ವಿಚಾರಿಸಿದ್ದುಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

https://youtu.be/NNq7coJZuIs
Continue Reading