DAKSHINA KANNADA
9/11 ಅಕ್ರಮ-ಸಕ್ರಮ ಫೈಲ್ ಕ್ಲಿಯರ್ ಮಾಡಿದಕ್ಕೆ ಶಾಸಕ ಅಶೋಕ್ ರೈಗೆ ಉಪ್ಪಿನಕಾಯಿ ಗಿಫ್ಟ್ ನೀಡಿದ ಮಹಿಳೆ

ಪುತ್ತೂರು ಜೂನ್ 09: 9/11 ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಫೈಲ್ ಕ್ಲಿಯರ್ ಮಾಡಿದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮಹಿಳೆಯೊಬ್ಬರು ಉಪ್ಪಿನ ಕಾಯಿ ಗಿಪ್ಟ್ ನೀಡಿದ್ದಾರೆ.
ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಚೈತ್ರಾ ರೈ ಉಪ್ಪಿನಕಾಯಿ ನೀಡಿದ ಮಹಿಳೆ. ಚೈತ್ರಾ ರೈ ಅವರು 9/11ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸ್ವೀಕಾರ ವಾಗಿರಲ್ಲಿಲ್ಲ. ಈ ಹಿನ್ನಲೆ ಚೈತ್ರಾ ರೈ ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದರು.

ಶಾಸಕ ಅಶೋಕ್ ರೈ ಅವರು ತಮ್ಮನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೆ ಚಿಕ್ಕಿ ನೀಡುವ ಪರಿಪಾಟ ಬೆಳೆಸಿಕೊಂಡಿದ್ದಾರೆ. 9/11 ಅರ್ಜಿಗೆ ಸಂಬಂಧಿಸಿದಂತೆ ಚೈತ್ರಾ ರೈ ಅವರು ದೂರು ನೀಡಲು ಬಂದ ಸಂದರ್ಭ ಶಾಸಕರು ಮಹಿಳೆಗೆ ಚಿಕ್ಕಿಯ ಖಾಲಿಯಾದ ಜಾರ್ ನ್ನು ನೀಡಿದ್ದರು. ಇದೀಗ ಮಹಿಳೆಯ ಅರ್ಜಿ ಸ್ವೀಕಾರವಾದ ಹಿನ್ನಲೆಯಲ್ಲಿ ಮತ್ತೆ ಶಾಸಕರ ಭೇಟಿಗೆ ಬಂದಿದ್ದಾರೆ. ಈ ವೇಳೆ ಶಾಸಕರು ನೀಡಿದ್ದ ಖಾಲಿ ಜಾರ್ ಗೆ ಉಪ್ಪಿನಕಾಯಿಯನ್ನು ತುಂಬಿಸಿಕೊಂಡು ಬಂದಿದ್ದು, ಶಾಸಕ ಅಶೋಕ್ ರೈಗೆ ಗಿಪ್ಟ್ ನೀಡಿದ್ದಾರೆ.