LATEST NEWS
ಮಂಗಳೂರು : BSC ಕಲಿಕೆಯ ವಿದ್ಯಾರ್ಥಿನಿ ಮೆಹರ್ ಬಾನು Missing..!
ಮಂಗಳೂರಿನ ಕೊಡಿಯಾಲ್ ಬೈಲ್ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ಮೆಹರ್ ಬಾನು ಕಳೆದ 10 ದಿನಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದಳು. ಅಕ್ಟೋಬರ್ 24ರಂದು ಸಂಜೆ 4 ಗಂಟೆಗೆ ತಾಯಿ ಹೊರಗೆ ಹೋಗಿದ್ದು 6 ಗಂಟೆಗೆ ವಾಪಸು ಬಂದು ನೋಡಿದಾಗ ಮಗಳು ಮೆಹರ್ ಬಾನು ಮನೆಯಲ್ಲಿ ಇರಲಿಲ್ಲ.
ಈ ಬಗ್ಗೆ ಎಲ್ಲ ಕಡೆ ವಿಚಾರಿಸಿದ್ದುಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.