LATEST NEWS
ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳು ಕಾಂಗ್ರೆಸ್ ನ ಪೊಲೀಸ್ ಠಾಣೆಗಳು – ವಿಪಕ್ಷ ನಾಯಕ ಅರ್.ಅಶೋಕ್

ಮಂಗಳೂರು ಜೂನ್ 09: ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳ ಕಾಂಗ್ರೇಸ್ ನ ಪೊಲೀಸ್ ಠಾಣೆಗಳಾಗಿದ್ದು, ಇರುವ ಅಧಿಕಾರಿಗಳು ಕಾಂಗ್ರೇಸ್ ನ ತಾಳಕ್ಕೆ ಕುಣಿಯುವ ಅಧಿಕಾರಿಗಳು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ತನ್ನ ತಾಳಕ್ಕೆ ಕುಣಿಯಲು ಮಂಗಳೂರಿನಲ್ಲಿರುವ ಅಧಿಕಾರಿಗಳನ್ನ ಬದಲಾವಣೆ ಮಾಡಿದೆ. ನಾವು ನಿಯೋಗದೊಂದಿ ಎಸ್ಪಿಯನ್ನು ಭೇಟಿ ಮಾಡಿದಾಗ ರಾತ್ರಿ ಹೊತ್ತು ಮನೆಗೆ ಹೋಗಲು ಯಾವ ಕಾನೂನಿನಲ್ಲಿ ಅವಕಾಶ ಇದೆ, ಕಾನೂನಿನ ಪುಸ್ತಕದಲ್ಲಿ ಅವಕಾಶ ಇದ್ಯಾ ಅಂತ ಎಸ್ಪಿಗೆ ಪ್ರಶ್ನೆ ಮಾಡಿದ್ವಿ, ಪಾಕಿಸ್ತಾನದವರನ್ನ ಹೊರಗೆ ಕಳಿಸಿ ಅಂದ್ರೆ ಇವರಿಗೆ ಕಳಿಸಲು ಆಗಿಲ್ಲ
ಆದರೆ ಹಿಂದೂಗಳ ಮನೆಗೆ ಹೋಗಿ ತೊಂದರೆ ಕೊಡ್ತಾರೆ, ದೇಶಪ್ರೇಮಿಗಳು ಹಾಗೂ ದೇಶದ್ರೋಹಿಗಳ ಒಂದೇ ತಕ್ಕಡಿಯಲ್ಲಿ ತೂಗಬೇಡಿ ಅಂದಿದ್ದೇವೆ. ಇದೆಲ್ಲಾ ಬಹಳ ದಿನ ನಡೆಯಲ್ಲ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರ ಯಾವಾಗ ಬೀಳುತ್ತೋ ಅನ್ನೋ ಗ್ಯಾರಂಟಿ ಇಲ್ಲ ಎಂದರು.

ಯಾರದ್ದೋ ಮಾತು ಕೇಳಿ ತಪ್ಪು ಮಾಡಿದ್ರೆ ಪಶ್ಚಾತ್ತಾಪ ಪಡ್ತೀರಾ ಅಂತ ಅಧಿಕಾರಿಗಳಿಗೆ ಹೇಳಿದ್ದೇವೆ, ಇದೇ ಲಾಸ್ಟ್, ನಾಳೆಯಿಂದ ಇದು ನಡೆಯಲ್ಲ ಅಂದಿದ್ದೇವೆ. ಬೆಂಗಳೂರಿನಲ್ಲಿ ವಿ ಆರ್ ವಿಥ್ ಪೊಲೀಸ್, ಆದರೆ ಮಂಗಳೂರಿನಲ್ಲಿ ವಿ ಆರ್ ನಾಟ್ ವಿತ್ ಪೊಲೀಸ್, ರಾಜಕೀಯ ಚಿತಾವಣೆಗೆ ತೊಂದರೆ ಕೊಟ್ಟರೆ ನಾವು ಬಿಡಲ್ಲ, ಕಾರ್ಯಕರ್ತರ ಪರ ನಾವಿದ್ದೇವೆ, ಯಾವುದೇ ಕಾರ್ಯಕರ್ತ ಭಯ ಪಡಬೇಕಿಲ್ಲ ಎಂದರು.