Connect with us

DAKSHINA KANNADA

ಮಂಗಳೂರು : ಹಿಂದುಳಿದ ವರ್ಗದ ಹಾಸ್ಟೆಲ್‌ನಲ್ಲಿ ರಾತ್ರಿ ಕಳೆದ IAS ಅಧಿಕಾರಿ..!

ಮಂಗಳೂರು : ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ರಾತ್ರಿ ಕಳೆದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ. ಪಿ.ಮಣಿವಣ್ಣನ್ ಐಎಎಸ್ ಇವರು ಕದ್ರಿ ಪಾಕ್೯ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಲಗಿ ಅಲ್ಲಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿ, ಸರಳತೆಯನ್ನು ಮೆರೆದಿದ್ದಾರೆ‌.ದಕ್ಷಿಣ ಕನ್ನಡ ಭೇಟಿಯಲ್ಲಿದ್ದ ಅವರು ಇಂದು ರಾತ್ರಿ 9.30 ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಸಕ್ರ್ರ್ಯುಟ್ ಹೌಸ್ ನಲ್ಲಿ ಬುಕಿಂಗ್ ಆಗಿದ್ದ ರೂಮನ್ನು ತ್ಯಜಿಸಿ ನೇರವಾಗಿ ಸಮೀಪದಲ್ಲೇ ಇರುವ ತಮ್ಮ ಅಧೀನದ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಮಲಗಿದ್ದಾರೆ. ಇಂದು ಬೆಳಿಗ್ಗೆ ರೈಲಿನಲ್ಲಿ ಬಂದು ನೆಟ್ಟಣ ನಿಲ್ದಾಣದಲ್ಲಿ ಇಳಿದು ಸುಳ್ಯ, ಸುಬ್ರಹ್ಮಣ್ಯ ಬಳಿಯ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳಿಗೆ ಭೇಟಿ ನೀಡುವವರಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅದು ಭೇಟಿ ಮೊಟಕುಗೊಳಿಸಿದ್ದರು. ಆದರೆ ಸಂಜೆ ವೇಳೆ ವಿಮಾನದ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಾಗೂ ನ್ಯಾಯಾಲಯದಲ್ಲಿ ನಡೆಯುವ ಕಲಾಪದಲ್ಲಿ ಭಾಗವಹಿಸಲಿದ್ದಾರೆ. ಸರಳ ವ್ಯಕ್ತಿತ್ವದ ಐಎಎಸ್ ಅಧಿಕಾರಿ ಜನಮನ್ನಣೆ ಪಡೆದುಕೊಂಡವರು. ಕೊರೊನಾ ಸಂದರ್ಭ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭ ಕಾರ್ಮಿಕರ ಹಿತಗಳ ಕುರಿತು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆ ಅಂದಿನ ಸರಕಾರ ತರಾತುರಿಯಲ್ಲಿ ವರ್ಗಾವಣೆ ಕೂಡ ನಡೆಸಿತ್ತು. ಈ ವೇಳೆ ಕಾರ್ಮಿಕರು ಬ್ರಿಂಗ್ ಬ್ಯಾಕ್ ಕ್ಯಾಪ್ಟನ್ ಅನ್ನೋ ಅಭಿಯಾನವನ್ನು ಕೈಗೊಂಡಿದ್ದರು.

Share Information
Advertisement
Click to comment

You must be logged in to post a comment Login

Leave a Reply