LATEST NEWS
ಮನೆ ಹಂಚು ತೆಗೆದು ಮಲಗಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ನೌಫಾಲ್ ಅರೆಸ್ಟ್
ಮಂಗಳೂರು ಅಕ್ಟೋಬರ್ 27: ಮನೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಾದ ಒಂದು ಗಂಟೆಯ ಒಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ಕೊಜಪಾಡಿಯ ನೌಫಾಲ್ (32) ಎಂದು ಗುರುತಿಸಲಾಗಿದೆ.
ಆರೋಪಿ ಬಾಡಿಗೆಮನೆಯಲ್ಲಿ ವಾಸವಾಗಿರುವ ನಾನು ಊಟ ಮುಗಿಸಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಮಕ್ಕಳ ಜೊತೆ ಬೆಡ್ ರೂಂನಲ್ಲಿ ಮಲಗಿದ್ದೆ. ರಾತ್ರಿ ಸುಮಾರು 12.10ರ ವೇಳೆ ಯಾರೋ ನನ್ನ ಕಾಲು ಸವರಿದಂತಾಯಿತು. ಎದ್ದು ಲೈಟ್ ಹಾಕಿ ನೋಡಿದಾಗ ಕೋಣೆಯೊಳಗೆ ಪುರುಷನೊಬ್ಬನಿರುವುದು ಕಂಡುಬಂತು. ನನ್ನನ್ನು ನೋಡಿದ ಕೂಡಲೇ ಆತ ಮಂಚದ ಕೆಳಗಿನಿಂದ ಎದ್ದು ಹಿಂಬಾಗಿಲನ್ನು ತೆರೆದು ಓಡಿ ಹೋದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ರಾತ್ರಿ 1 ಗಂಟೆ ಸುಮಾರಿಗೆ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿ ವಿರುದ್ಧ ಕೊಣಾಜೆ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 448 (ಮನೆಗೆ ಅಕ್ರಮ ಪ್ರವೇಶ) ಹಾಗೂ 354 (ಮಹಿಳೆಯ ಮಾನಭಂಗ ಯತ್ನ) ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
You must be logged in to post a comment Login