LATEST NEWS
ಮಂಗಳೂರು – 2.2 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ
ಮಂಗಳೂರು ಫೆಬ್ರವರಿ 15: ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2.2 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದಾರೆ. ಎಂ.ಎ. ಜಾಬೀರ್, ವಿ.ಪಿ. ಆಸೀರ್, ಎನ್.ಶರೀಫ್, ಎಲ್.ಕೆ. ಶಬಾದ್ ಬಂಧಿತರು. ಆರೋಪಿಗಳು ಕೊಡಗು, ಕೇರಳ ಮೂಲದವರಾಗಿದ್ದು, ಮಂಗಳೂರಿನ ಕಂಕನಾಡಿ ಪೊಲೀಸರು ಇವರನ್ನು ನಗರದ ಜೆಪ್ಪಿನಮೊಗರು ಬಳಿ ಬಂಧಿಸಿದ್ದಾರೆ.
ವಾರಗಳ ಹಿಂದೆ ಕೊಣಾಜೆ ಠಾಣೆ ಪೊಲೀಸರು 3.48 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಎರಡನೇ ಪ್ರಕರಣದಲ್ಲೂ ಕೋಟ್ಯಂತರ ರೂ. ಮೌಲ್ಯದ ತಿಮಿಂಗಲ ವಾಂತಿ ವಶಪಡಿಸಿಕೊಳ್ಳಲಾಗಿದೆ