Connect with us

LATEST NEWS

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪೋಟೋ – ಕೂಲಿ ಕೆಲಸ ಮಾಡುತ್ತಿದ್ದವ ಈಗ ಮಾಡೆಲ್

ತಿರುವನಂತಪುರಂ: ಅದೃಷ್ಟ ಕೆಲವರನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಈ ವ್ಯಕ್ತಿ ಸಾಕ್ಷಿ, ಸಾಮಾಜಿಕ ಜಾಲತಾಣದಲ್ಲಿ ಬಂದ ಒಂದು ಪೋಟೋ 60 ವರ್ಷದ ಕೂಲಿ ಕಾರ್ಮಿಕನನ್ನು ಮಾಡೆಲ್ ಆಗಿ ಪರಿವರ್ತಿಸಿದೆ. ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಕೇರಳದ 60 ವರ್ಷದ ಮಮ್ಮಿಕಾ ದಿಢೀರಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.


ಖ್ಯಾತ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅವರು ತೆಗೆದ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಡೆಲ್ ಆಗುವ ಮೊದಲು ಅವರು ಹೇಗಿದ್ದರು ಎನ್ನುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕೂಲಿ ಕಾರ್ಮಿಕರ ಡ್ರೆಸ್‍ನಲ್ಲಿದ್ದರೂ ಅದೇನೋ ಗ್ಲಾಮರ್ ಲುಕ್ ಅವರ ಮೊಗದಲ್ಲಿ ಕಾಣುತ್ತದೆ. ಹೀಗಾಗಿ ಮಮ್ಮಿಕಾ ಅವರನ್ನು ಶರೀಕ್ ಅವರು ಮೇಕಪ್ ಕಲಾವಿದಾರ ಮಜ್ನಾಸ್, ಆಶಿಕ್ ಪುವಾದ್ ಮತ್ತು ಶಬೀಬ್ ವಯಾಲಿಲ್ ಅವರಿಂದ ಮೇಕಪ್ ಮಾಡಿಸಿ ಬ್ರ್ಯಾಂಡ್ ಬಟ್ಟೆಯನ್ನು ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೂಟುಬೂಟು, ದುಬಾರಿ ಗ್ಲಾಸ್ ಧರಿಸಿ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.


ಮಾಸಿದ ಲುಂಗಿ ಮತ್ತು ಶರ್ಟ್ ತೊಡುತ್ತಿದ್ದರು. ಕೂಲಿ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇದೀಗ ಇವರನ್ನು ಗುರುತಿಸಿದ ಜಾಹೀರಾತು ಏಜೆನ್ಸಿಯೊಂದು ಮಾಡೆಲ್ ಆಗಿ ಮಾಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿವೆ.

Advertisement
Click to comment

You must be logged in to post a comment Login

Leave a Reply