Connect with us

LATEST NEWS

ಮುಂಡಿತ್ತಾಯ ವೈದ್ಯನಾಥ ದೈವಸ್ಥಾನ ಜೀರ್ಣೋದ್ದಾರ- ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ

ಮಂಗಳೂರು ಅಕ್ಟೋಬರ್ 15: ಅಳಪೆ ಕಣ್ಣೂರಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕಾಲದ ಮುಂಡಿತ್ತಾಯ ವೈದ್ಯನಾಥ ದೈವಸ್ಥಾನದ ಜೀರ್ಣೋದ್ಧಾರವು ಆಗುತ್ತಲಿದ್ದು ಅದಕ್ಕೆ ಪೂರಕವಾಗಿ ದೈವಸ್ಥಾನದ ತಡೆಗೋಡೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅಗತ್ಯವಿದ್ದ 75 ಲಕ್ಷ ರೂ.ವನ್ನು ಒದಗಿಸಿಕೊಟ್ಟಿದ್ದ ಕ್ಷೇತ್ರದ ಜನಪ್ರಿಯ ಶಾಸಕ ವೇದವ್ಯಾಸ್ ಕಾಮತ್ ಅವರು ಅದರ ಕಾಮಗಾರಿಗೆ ಚಾಲನೆಯನ್ನು ನೀಡಿದರು.


ದೈವಸ್ಥಾನದ ಜೀರ್ಣೋದ್ಧಾರಕ್ಕೆ ಮೂರುವರೆ ಕೋಟಿ ಅನುದಾನ ಆಗತ್ಯವಿದ್ದು ಈಗಾಗಲೇ ಶಾಸಕರು ಸರ್ಕಾರದ 15ನೇ ಹಣಕಾಸಿನ ಅನುದಾನದಲ್ಲಿ 75 ಲಕ್ಷ ಒದಗಿಸಿ ಕೊಟ್ಟಿದ್ದು ಉಳಿದ 25 ಲಕ್ಷವನ್ನೂ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದು ಕ್ಷೇತ್ರದ ಪರವಾಗಿ ಅವರಿಗೆ ಧನ್ಯವಾದಗಳು. ಮುಂದುವರೆದು ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳಿಗೂ ಸಹಾಯವನ್ನು ಒದಗಿಸಿ ಕೊಡುವುದಾಗಿ ಶಾಸಕರು ಹೇಳಿದ್ದು ಅವರಿಗೆ ನಾವು ಆಭಾರಿಯಾಗಿದ್ದೇವೆ.

Share Information
Advertisement
Click to comment

You must be logged in to post a comment Login

Leave a Reply