Connect with us

LATEST NEWS

80 ಲಕ್ಷ ಹಣ ಕದ್ದೊಯ್ಯುತ್ತಿದ್ದ ಕಳ್ಳನ ಹಿಡಿದ ಕೇರಳದ ಯುವಕ

ದುಬೈ : 80 ಲಕ್ಷ ಹಣವನ್ನು ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಕೇರಳದ ಯುವಕನೊಬ್ಬ ಫುಟ್ಬಾಲ್ ಶೈಲಿಯ ಟ್ರಿಕ್ಸ್‌ನಿಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಹಾಯ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಿದ್ದು ದುಬೈಯಲ್ಲಿ. ಕೇರಳ ಮೂಲದ 40 ವರ್ಷದ ಜಾಫರ್ ಎಂಬವರ ಸಾಹಸದ ಕತೆಯಿದು. ಜಾಫರ್ ತನ್ನ ಸಂಬಂಧಿಯೊಬ್ಬರ ಕೆಫೆಟೇರಿಯಾದಲ್ಲಿದ್ದಾಗ ವ್ಯಕ್ತಿಯೊಬ್ಬ ಹಣದೊಂದಿಗೆ ಓಡುವ ದೃಶ್ಯವನ್ನು ಕಂಡಿದ್ದರು.

ಈ ವೇಳೆ, ಅಲ್ಲಿದ್ದವರೆಲ್ಲಾ ಕಳ್ಳನನ್ನು ಹಿಡಿಯಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಈ ವೇಳೆ ಕಳ್ಳನನ್ನು ನೋಡಿದ ಜಾಫರ್ ಓಡುತ್ತಿದ್ದ ಕಳ್ಳನಿಗೆ ತನ್ನ ಕಾಲನ್ನು ಅಡ್ಡವಾಗಿ ಹಿಡಿದಿದ್ದರು. ಪರಿಣಾಮ, ವೇಗವಾಗಿ ಓಡುತ್ತಿದ್ದ ಕಳ್ಳ ಅರೆಕ್ಷಣದಲ್ಲಿ ದೊಪ್ಪನೆ ನೆಲಕ್ಕುರುಳಿದ್ದ, ನಂತರ ಜನರು ಈ ಕಳ್ಳನನ್ನು ಹಿಡಿದಿದ್ದಾರೆ.


ಲಭ್ಯ ಮಾಹಿತಿ ಪ್ರಕಾರ ಏಪ್ರಿಲ್ 14ರಂದು ಬನಿಯಾ ಸ್ಕ್ವೇರ್ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇದಾದ ಬಳಿಕ ಕಳ್ಳನನ್ನು ಹಿಡಿದ ಜನರು ಈತನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಜೊತೆಗೆ, ಈತ ಕದ್ದ ಹಣ ಕೂಡಾ ಮಾಲಿಕರ ಕೈಸೇರಿದೆ.