LATEST NEWS
ತೆಕ್ಕಟ್ಟೆ – ದೇವಸ್ಥಾನದ ಒಳಗೆ ನೇಣಿಗೆ ಶರಣಾದ ಯುವಕ
ತೆಕ್ಕಟ್ಟೆ ಮಾರ್ಚ್ 7: ದೇವಸ್ಥಾನದ ಒಳಗೆ ಯುವನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ,
ಆತ್ಮಹತ್ಯೆಗೆ ಶರಣಾದ ಯುವಕನನ್ನು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35 ವ) ಎಂದು ಗುರುತಿಸಲಾಗಿದೆ. ದೇವಸ್ಥಾನದ ಬಾವಿಯ ಹಗ್ಗವನ್ನು ಉಪಯೋಗಿಸಿ ಚಂದ್ರ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇಂದು ಬೆಳಗ್ಗೆ ದೇವಸ್ಥಾನದ ಕಸ ಗುಡಿಸುವ ಕೆಲಸಗಾರರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.