LATEST NEWS
ಹೆಣ್ಣು ಮಕ್ಕಳನ್ನು ಚುಡಾಯಿಸಿದ ಮುದುಕನಿಗೆ ಧರ್ಮದೇಟು

ಹೆಣ್ಣು ಮಕ್ಕಳನ್ನು ಚುಡಾಯಿಸಿದ ಮುದುಕನಿಗೆ ಧರ್ಮದೇಟು
ಮಂಗಳೂರು ಜನವರಿ 31: ಹೆಣ್ಣುಮಕ್ಕಳನ್ನು ಚುಡಾಯಿಸಿದ ವೃದ್ಧ ನನ್ನು ಸಾರ್ವಜನಿಕರು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬೆಂಗ್ರೇಯಲ್ಲಿ ಘಟನೆ ನಡೆದಿದ್ದು 55 ವರ್ಷದ ವೃದ್ಧನೋರ್ವ ಸ್ಥಳೀಯ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ವೃದ್ಧನ ಅನಾಚರವನ್ನು ಸಹಿಸದ ಸ್ಥಳೀಯರು ವೃದ್ಧನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

ಹೆಣ್ಣು ಮಕ್ಕಳ ಹೆತ್ತವರು ವೃದ್ಧನಿಗೆ ಯದ್ವಾತದ್ವ ಬಾರಿಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವೃದ್ಧನಿಗೆ ಧರ್ಮದೇಟು ಬೀಳುತ್ತಿರುವ ಮೊಬೈಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಚಪಲ ತೀರದ ವೃದ್ದನಿಗೆ ಕಠಿಣ ಶಿಕ್ಷೆಯಾಗಲು ಆಗ್ರಹಿಸಿದ್ದಾರೆ.