DAKSHINA KANNADA
ಚಂದ್ರ ಗ್ರಹಣ ಜಿಲ್ಲೆಯ ದೇವಸ್ಥಾನಗಳು ಬಂದ್
ಚಂದ್ರ ಗ್ರಹಣ ಜಿಲ್ಲೆಯ ದೇವಸ್ಥಾನಗಳು ಬಂದ್
ಸುಬ್ರಹ್ಮಣ್ಯ ಜನವರಿ 31: ಚಂದ್ರಗ್ರಹಣ ಹಿನ್ನಸೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳು ರಾತ್ರಿ 9 ಗಂಟೆಯವರೆಗೆ ಸಂಪೂರ್ಣ ಬಂದ್ ಆಗಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಗ್ರಹಣದ ನಿಮಿತ್ತ ಇಂದು ಬೆಳಿಗ್ಗೆ 6.30ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇದೆ.
ಮಧ್ಯಾಹ್ನದ ಮಹಾಪೂಜೆಯನ್ನು ಬೆಳಿಗ್ಗೆ 8 ಗಂಟೆಗೆ ಮುಗಿಯಲ್ಲಿದ್ದು ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ಬೋಜನ ವಿತರಣೆ ಇರುವುದಿಲ್ಲ. ಅಲ್ಲದೆ ಗ್ರಹಣ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಅಲ್ಲದೇ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೂ ರಾತ್ರಿ 9 ರವರೆಗೆ ದೇವರ ದರ್ಶನ ಹಾಗೂ ಪೂಜಾ ಸೇವೆ ಸ್ಥಗಿತಗೊಳ್ಳಲಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಗ್ರಹಣ ಸಂಬಂಧ ಯಾವುದೇ ಸೇವೆಗಳು ನಡೆಯುವುದಿಲ್ಲ.
You must be logged in to post a comment Login