BANTWAL
ಕಾಂಗ್ರೇಸ್ ನಿಂದ ಮನೆ ಮನೆ ಭೇಟಿ, ಬಂಟ್ವಾಳದಲ್ಲಿ ವ್ಯಕ್ತಿಯಿಂದ ಮಾತಿನ ಚಾಟಿ
ಕಾಂಗ್ರೇಸ್ ನಿಂದ ಮನೆ ಮನೆ ಭೇಟಿ, ಬಂಟ್ವಾಳದಲ್ಲಿ ವ್ಯಕ್ತಿಯಿಂದ ಮಾತಿನ ಚಾಟಿ
ಬಂಟ್ವಾಳ,ಅಕ್ಟೋಬರ್ 30: ಕಾಂಗ್ರೇಸ್ ಪಕ್ಷದ ಮನೆ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾಂಗ್ರೇಸ್ ಕಾರ್ಯಕರ್ತರಿಗೆ ವ್ಯಕ್ತಿಯೊಬ್ಬರು ಮಂಗಳಾರತಿ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಟ್ವಾಳ ತಾಲೂಕಿನ ಪರಿಸರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯ ಮನೆಗೆ ಬಂದ ಇಬ್ಬರು ಕಾಂಗ್ರೇಸ್ ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ಕಾಂಗ್ರೇಸ್ ಪಕ್ಷದ ವತಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಪರಿಚಯಿಸುವ ಇಬ್ಬರು ಕಾರ್ಯಕರ್ತರಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳನನ್ನು ಕೊಂದವರನ್ನು ಸಾಕುವ ಕಾಂಗ್ರೇಸ್ ನವರಿಗೆ ಈ ಮನೆಗೆ ಎಂಟ್ರಿಯಿಲ್ಲ ಎಂದು ವ್ಯಕ್ತಿ ಹೇಳಿರುವುದಲ್ಲದೆ, ಇನ್ನೆಷ್ಟು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಬೇಕಿದೆ ಎಂದೂ ಪ್ರಶ್ನಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಸಜಿಪಮುಡ್ನೂರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತ ಯುವತಿಯೋರ್ವಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆಯನ್ನೂ ಉಲ್ಲೇಖಿಸಿರುವ ಮನೆಯಾತ ಕಾಂಗ್ರೇಸ್ ಪಕ್ಷದವರಿಗೆ ತನ್ನ ಮನೆಗೆ ಎಂಟ್ರಿ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವುದು ವಿಡಿಯೋದಲ್ಲಿದೆ.
ವಿಡಿಯೋಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
You must be logged in to post a comment Login