Connect with us

    BANTWAL

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಆಯ್ಕೆ

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಆಯ್ಕೆ

    ಬಂಟ್ವಾಳ, ಅಕ್ಟೋಬರ್ 30: ತೆಂಕುತಿಟ್ಟು ಯಕ್ಷಗಾನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನ ಶಿವರಾಮ ಜೋಗಿ ಈ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ತಿಂಕುತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೇಷ ಸೇರಿದಂತೆ ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ಶಿವರಾಮ ಜೋಗಿಯವರು ಕಳೆದ 58 ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಕೊಂಡಿದ್ದಾರೆ. ಯಕ್ಷಗಾನದ ಮೇರು ವ್ಯಕ್ತಿಗಳಾದ ಗೋಪಾಲಕೃಷ್ಣ ಶ್ರೇಣಿ, ಸಾಮಗ, ಕುಂಬ್ಳೆ ಸುಂದರ್ ರಾವ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಪಾತ್ರ ನಿರ್ವಹಿಸಿದ ಅನುಭವ ಶಿವರಾಮ ಜೋಗಿಯವರದ್ದಾಗಿದೆ. ಕೂಡ್ಲು ಮೇಳ, ಮುಲ್ಕಿ ಮೇಳಗಳಲ್ಲಿ ವೇಷಧಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಸುರತ್ಕಲ್ ಮೇಳವೊಂದರಲ್ಲೇ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ. ತನ್ನ 15 ನೇ ವರ್ಷದಲ್ಲೇ ಯಕ್ಷಗಾನಕ್ಕೆ ಕಾಲಿರಿಸಿದ್ದ ಶಿವರಾಮ ಜೋಗಿಯವರ ಕಲೆಯನ್ನು ಗುರುತಿಸಿ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಈ ಹಿಂದೆಯೇ ಅವರನ್ನು ಹರಸಿ ಬಂದಿದೆ.

    ವಿಡಿಯೋಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

    Share Information
    Advertisement
    Click to comment

    You must be logged in to post a comment Login

    Leave a Reply