FILM
ಕ್ಯಾನ್ಸರ್ ಗೆದ್ದ ಮಲೆಯಾಳಂ ನಟಿಗೆ ಈಗ ಮತ್ತೊಂದು ಕಾಯಿಲೆ..ನನ್ನ ಮೈ ಬಣ್ಣ ಕಳೆದುಕೊಳ್ಳುತ್ತಿದ್ದೇನೆ ಎಂದ ನಟಿ
ಕೇರಳ: ಕ್ಯಾನ್ಸರ್ ವಿರುದ್ದ ಹೋರಾಡಿ ಗೆದ್ದ ಮತ್ತೆ ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಮಲಯಾಳಂ ನಟಿ ಮಮತಾ ಮೋಹನ್ದಾಸ್ ಅರಿಗೆ ಈಗ ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅವರ ಚರ್ಮದ ಬಣ್ಣ ಅಲ್ಲಲ್ಲಿ ಮಾಸುತ್ತಿದೆ. ಈ ಸುದ್ದಿಯನ್ನು ಮಮತಾ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಮತಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ದೇಹದ ಕೆಲ ಭಾಗಗಳಲ್ಲಿ ಬಣ್ಣ ಕಳೆದುಕೊಂಡಿರುವುದು ಗೊತ್ತಾಗುತ್ತದೆ. ‘ಸೂರ್ಯನೇ ನಾನು ನಿನ್ನನ್ನು ಅಪ್ಪಿಕೊಳ್ಳುತ್ತಿದ್ದೇನೆ. ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಮುಂಜಾನೆ ನಿನ್ನ ಕಿರಣಗಳನ್ನು ನೋಡಬೇಕೆಂದು ನಿನಗಿಂತ ಮೊದಲು ನಾನು ಎದ್ದಿದ್ದೇನೆ. ನಿನ್ನ ಕೃಪೆಗೆ ನಾನು ಸದಾ ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.
ಮಮತಾ ಮೊಹನ್ ದಾಸ್ ಅವರು ವಿಟಲೈಗೋ. ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಟಲೈಗೋ ಕಾಯಿಲೆ ಕಾಣಿಸಿಕೊಂಡರೆ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಬಣ್ಣ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಬಣ್ಣಕ್ಕೆ ಕಾರಣವಾದ ಮೆಲನಿನ್ ಕೊರತೆಯಿಂದ ಈ ರೀತಿ ಆಗುತ್ತದೆ. ಮೆಲನೋಸೈಟ್ನಲ್ಲಿ ಮೆಲನಿನ್ ಉತ್ಪಾದನೆ ಆಗುತ್ತದೆ. ಈ ಕಾಯಿಲೆ ಕಾಣಿಸಿಕೊಂಡರೆ ಮೆಲನೋಸೈಟ್ಗಳು ನಾಶವಾಗುತ್ತವೆ.