Connect with us

FILM

ಕೊನೆಗೂ ರಾಖಿ ಸಾವಂತ್ ಮದುವೆ ಕನ್ಪರ್ಮ್….!!

ಮುಂಬೈ ಜನವರಿ 16: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ ಕೊನೆಗೂ ಮೈಸೂರಿ ಹುಡುಗನ ಜೊತೆ ಮದುವೆಯ ಸುದ್ದಿ ಕನ್ಪರ್ಮ್ ಆಗಿದೆ. ಸ್ವತಃ ಆದಿಲ್ ಖಾನ್ ರಾಖಿ ಜೊತೆಗಿನ ವಿವಾಹವನ್ನು ದೃಢಪಡಿಸಿದ್ದು, ಕೊನೆಗೂ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ಅವರ ನಡುವಿನ ಮದುವೆ ಗಲಾಟೆ ಸುಖಾಂತ್ಯ ಕಂಡಿದೆ.


ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಆದಿಲ್ ಖಾನ್ ದುರಾನಿ ಕೊನೆಗೂ ತಮ್ಮ ಮದುವೆ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ಕೊನೆಗೂ ನಾನು ಈ ಮದುವೆಯನ್ನು ಘೋಷಿಸುತ್ತಿದ್ದೇನೆ. ನಾನು ರಾಖಿಯನ್ನು ಮದುವೆಯಾಗಿಲ್ಲ ಎಂದು ಎಲ್ಲಿಯೂ ಹೇಳಿರಲಿಲ್ಲ. ಕೆಲ ವಿಚಾರ, ಸಮಸ್ಯೆಗಳ ಸರಿಪಡಿಸುವ ಸಲುವಾದಿ ಈ ವಿಚಾರದಲ್ಲಿ ಮೌನ ತಾಳಿದ್ದೆಯಷ್ಟೇ. ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ರಾಖಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಆವರಣದ ಒಳಗಡೆ ಪಾಪ್ಪುಡಿ ಎಂದು ಬರೆದಿರುವುದು ಕಂಡು ಬಂದಿದೆ. ಬಹುಶಃ ಆದಿಲ್ ಇದೇ ಹೆಸರಿನಿಂದ ರಾಖಿ ಅವರನ್ನು ಕರೆಯುತ್ತಾರೆಂದೆನಿಸುತ್ತದೆ. ಜೊತೆಗೆ ಆದಿಲ್ ಅವರು ತಮ್ಮ ಮದುವೆ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ್ದು, ಇದರಲ್ಲಿ ಆದಿಲ್ ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿರುವುದು ಕಂಡು ಬಂದಿದೆ.

ಇನ್ನು ರಾಖಿ ಸಾವಂತ್ ಸಾಂಪ್ರದಾಯಿಕ ಉಡುಗೆ ಧರಿಸಿದ್ದು, ಕುಂಕುಮ ಅಥವಾ ಬಿಂದಿ ಇಟ್ಟಿರಲಿಲ್ಲ. ತಲೆಯ ಮೇಲೆ ದುಪಟ್ಟಾ ಕವರ್ ಮಾಡಿಕೊಂಡಿರುವುದು ಕಂಡು ಬಂದಿದೆ. ಆದಿಲ್ ಅವರ ಈ ಪೋಸ್ಟ್’ಗೆ ಕಮೆಂಟ್ ಮಾಡಿರುವ ರಾಖಿ ಸಾವಂತ್ ಅವರು, ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದಿದ್ದಾರೆ.

 

Advertisement
Click to comment

You must be logged in to post a comment Login

Leave a Reply