LATEST NEWS
ಮಲ್ಪೆ ಬಂದರಿನಲ್ಲಿ ಮೀನು ಲೋಡ್ ಮಾಡುವಾಗ ವಾಹನ ಅವಘಡ

ಉಡುಪಿ: ಇಂದು ಮುಂಜಾನೆ ಮಲ್ಪೆ ಬಂದರಿನಲ್ಲಿ ನಡೆದ ಘಟನೆ, ಅನ್ಲೋಡ್ ಮಾಡುತ್ತಿದ್ದ ಬೋಟಿನ ಹಗ್ಗ ಕಳಚಿಕೊಂಡು ನಿಧಾನವಾಗಿ ನೀರಿನಲ್ಲಿ ಹಿಂದಕ್ಕೆ ಸರಿದ ಬೋಟ್,
ಬೋಟಿಗೆ ಹಗ್ಗ ಸಿಕ್ಕಿಬಿದ್ದು ಕೆಳಕ್ಕೆ ಎಳೆಯಲ್ಪಟ್ಟ ಮಿನಿ ಟೆಂಪೋ ನೀರಿಗೆ ಬಿದ್ದಿದೆ. ಮಿನಿ ಟೆಂಪೋ ವಿಠ್ಠಲ ಪೂಜಾರಿ ಎಂಬವರಿಗೆ ಸೇರಿದ ವಾಹನವಾಗಿದೆ , ಟೆಂಪೋ ಗಾಡಿ ಕೆಳಕ್ಕೆ ಉರುಳುತ್ತಿದ್ದಂತೆ ವಾಹನದಿಂದ ಜಿಗಿದು ಸಣ್ಣಪುಟ್ಟ ಗಾಯಗಳೊಂದಿಗೆ ವಿಠಲ ಪೂಜಾರಿ ಪಾರಾಗಿದ್ದಾರೆ . ನೀರಿಗೆ ಬಿದ್ದ ವಾಹನವನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು .

Video: