Connect with us

    DAKSHINA KANNADA

    ಮಳಲಿ ಮಸೀದಿ ವಿವಾದ: ವಿಹೆಚ್​ಪಿಗೆ ಮೊದಲ ಗೆಲುವು….ಅರ್ಜಿ ಸ್ವೀಕರಿಸಿದ ಕೋರ್ಟ್​..!!

    ಮಂಗಳೂರು ನವೆಂಬರ್ 09: ಮಳಲಿ ಮಸೀದಿ ಜಾಗದ ವಿವಾದಕ್ಕೆ ಸಂಬಂದಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಇದರೊಂದಿಗೆ ಈ ಕೇಸ್ ನಲ್ಲಿ ಹಿಂದೂ ಸಂಘಟನೆಗಳಿಗೆ ಮೊದಲ ಗೆಲವು ದೊರೆತಂತಾಗಿದೆ.


    ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಮತ್ತು ವಿಎಚ್​ಪಿ ಅರ್ಜಿ ವಜಾ ಮಾಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿಯೇ ಅರ್ಜಿಯ ವಿಚಾರಣೆ ನಡೆಯಲಿದೆ.

    ಕೋರ್ಟ್ ಕಮಿಷನರ್ ನೇಮಿಸಿ, ಮಸೀದಿ ಸರ್ವೇ ನಡೆಸಬೇಕು ಎಂದು ವಿಎಚ್​ಪಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ವಿಎಚ್​ಪಿ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply