Connect with us

    FILM

    ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣೋಟಕ್ಕೆ ಫಿದಾ ಆದ ಯುವಜನತೆ

     

    ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣೋಟಕ್ಕೆ ಫಿದಾ ಆದ ಯುವಜನತೆ

    ಮಂಗಳೂರು ಫೆಬ್ರವರಿ 12: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಚೆಲುವೆಯೇ ಈ ಪ್ರಿಯಾ ಪ್ರಕಾಶ್ ವಾರಿಯರ್.

    ಕೇವಲ ಒಂದು ಹಾಡಿನಿಂದ ರಾತ್ರಿ ಬೆಳೆಗಾಗದೊರಳಗೆ ಇಂಟರ್ ನೆಟ್ ಸ್ಟಾರ್ ಆಗಿದ್ದಾಳೆ.

    ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗ ಪ್ರವೇಶಿಸಿದ್ದು, ಮೊದಲ ಚಿತ್ರದ ಮೊದಲ ಹಾಡಿನಲ್ಲೇ ಮೋಡಿ ಮಾಡಿದ್ದಾರೆ.

    ಎಲ್ಲಿ ನೋಡಿದರೂ ಆ ವಿಡಿಯೋದ ಸಣ್ಣ ತುಣುಕು, ಅದಕ್ಕೆ ಸಾವಿರಾರು ಟ್ರೋಲ್‌ ಗಳು , ಇದು ಸಾಮಾಜಿಕ ಜಾಲತಾಣಗಳಲ್ಲಿ ಇದು ಪಡ್ಡೆ ಹುಡುಗರ ಫೇವರಿಟ್.

    ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್ ಸೇರಿದಂತೆ ಯಾವ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಇದೇ ವೀಡಿಯೋ. ಇದೇ ಹುಡುಗಿಯ ವಾಟ್ಸ್​ಆ್ಯಪ್​ ಸ್ಟೇಟಸ್​.

    ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣಲ್ಲೇ ಮಾತನಾಡಿರುವ ದೃಶ್ಯವಿರುವ ಹಾಡಿನ ಭಾಗ ವೈರಲ್ ಆಗಿದೆ. ಈ ಹಾಡನ್ನು ಶಾನ್ ರೆಹಮಾನ್ ಸಂಯೋಜಿಸಿದ್ದು,

    ವಿನೀತ್ ಶ್ರೀನಿವಾಸನ್ ಹಾಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯ್ಯೂಟ್ಯೂಬ್ ನಲ್ಲಿ ವೈರಲ್ ಆಗತೊಡಗಿದೆ.

    ಈ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ನಿರ್ವಹಿಸುತ್ತಿರೋ ಇವರು, ಇದೊಂದೆ ಒಂದು ವೀಡಿಯೋ ಕ್ಲಿಪ್‍ನಿಂದಾಗಿ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟಿದ್ದಾರೆ.

    ಅಷ್ಟೆ ಯಾಕೆ ಒಂದೇ ದಿನದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ಈ ರೀತಿ ಒಂದೇ ರಾತ್ರಿಯಲ್ಲಿ ಸಂಚಲನ ಮೂಡಿಸಿದವರಲ್ಲಿ ಪ್ರಿಯಾ ಮೊದಲೇನಲ್ಲ.

    ಇತ್ತೀಚೆಗೆ ಮಲೆಯಾಳಂ ಜುಮಿಕಿ ಕಮಾಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದ ಕೇರಳದ ಕೊಚ್ಚಿಯಲ್ಲಿ ಅಕೌಂಟೆನ್ಸಿಯ ಉಪನ್ಯಾಸಕಿಯಾಗಿರುವ ಶಿರಿಲ್ ಕಾಡವನ್ ಸ್ಟಾರ್ ಆದರು,

    ಅದೇ ರೀತಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯದ ಇಂಟರ್ ನೆಟ್ ಸ್ಟಾರ್.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply