Connect with us

FILM

ಮಲೆಯಾಳಂನ ರೊಮ್ಯಾಂಟಿಕ್ ತಾತ ಉನ್ನಿಕೃಷ್ಣನ್ ನಂಬೂದಿರಿ ಇನ್ನಿಲ್ಲ

ಕೇರಳ :ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿನ್ನೆ (ಜನವರಿ 20) ರಂದು ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮಲೆಯಾಳಂನ ರೊಮ್ಯಾಂಟಿಕ್ ತಾತನಾಗಿ ಕಾಣಿಸಿಕೊಳ್ಳುತ್ತಿದ್ದರು.


1996 ರಲ್ಲಿ ಬಿಡುಗಡೆ ಆದ ‘ದೇಸದಾನಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಉನ್ನಿಕೃಷ್ಣನ್ ನಟಿಸಿದ್ದರು. ಆ ನಂತರ ಹಲವಾರು ಹಿಟ್, ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯ ತಾತನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.


ಇತ್ತೀಚೆಗೆ ಉನ್ನಿಕೃಷ್ಣ ಅವರಿಗೆ ಕೊರೊನಾ ವೈರಸ್ ತಗುಲಿತ್ತು ಆದರೆ ಅದರಿಂದ ಗುಣಮುಖರಾಗಿದ್ದರು. ಆದರೆ ಮತ್ತೆ ಅನಾರೋಗ್ಯ ಕಂಡುಬಂದ ಕಾರಣ ಕೆಲ ದಿನಗಳಿಂದಲೂ ಕೂನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉನ್ನಿಕೃಷ್ಣನ್ ಗೆ ಯಮುನಾ ಹಾಗೂ ಯಮುನಾ ಹಾಗೂ ಪಿವಿ ಕನ್ನಿಕೃಷ್ಣ ಎಂಬ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಕನ್ನಿಕೃಷ್ಣ ಅವರು ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.
ಉನ್ನಿಕೃಷ್ಣನ್ ಅವರ ನಿಧನಕ್ಕೆ ಚಿತ್ರರಂಗ ಹಲವರು ಕಂಬನಿ ಮಿಡಿದಿದ್ದಾರೆ.

Advertisement
Click to comment

You must be logged in to post a comment Login

Leave a Reply