Connect with us

    LATEST NEWS

    ಮೃತ ಆನೆಗೆ ಅರಣ್ಯಾಧಿಕಾರಿಯೊಬ್ಬರ ಕಣ್ಣೀರ ವಿದಾಯ…ಕಣ್ಣಲ್ಲಿ ನೀರು ತರಿಸುವ ವಿಡಿಯೋ

    ಚೆನೈ : ಈ ದೃಶ್ಯ ಕಲ್ಲು ಹೃದಯದವರನ್ನು ಒಂದು ಕ್ಷಣ ಬಾವುಕಲೋಕಕ್ಕೆ ಕೊಂಡೊಯ್ಯುವಂತದ್ದು, ಅರಣ್ಯಾಧಿಕಾರಿಯೊಬ್ಬರು ಮೃತ ಆನೆಯೊಂದರ ಸೊಂಡಿಲನ್ನು ಹಿಡಿದುಕೊಂಡು ರೋದಿಸುತ್ತಿರುವ ಈ ದೃಶ್ಯ ನೋಡುತ್ತಿದ್ದರೆ ನಮಗೇ ಗೊತ್ತಿಲ್ಲದಂತೆ ಕಣ್ಣೀರು ಕೆನ್ನೆ ಸವರಿ ಕೆಳಗೆ ಜಾರಿರುತ್ತದೆ.


    ಈ ವಿಡಿಯೋ ಸೆರೆಯಾಗಿದ್ದು ತಮಿಳುನಾಡಿನ ಮದುಮಲೈ ಹುಲಿ ರಕ್ಷಿತಾರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ. ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಆನೆಯೊಂದನ್ನು ಈ ಆನೆ ಶಿಬಿರಕ್ಕೆ ಚಿಕಿತ್ಸೆಗೆಂದು ತರಲಾಗಿತ್ತು. ಇಲ್ಲಿನ ಸಿಬ್ಬಂದಿ ಬಹಳ ಪ್ರೀತಿಯಿಂದ ಮತ್ತು ಅಷ್ಟೇ ಮುತುವರ್ಜಿಯಿಂದ ಈ ಆನೆಯ ಆರೈಕೆ ಮಾಡಿದ್ದರು. ಹೇಗಾದರೂ ಆನೆಯನ್ನು ಬದುಕಿಸಲೇಬೇಕೆಂದು ಇವರೆಲ್ಲರೂ ಹಗಳಿರುಳು ಶ್ರಮಿಸಿದ್ದರು. ಆದರೆ, ಇವರೆಷ್ಟು ಪ್ರಯತ್ನಪಟ್ಟರೂ ಆನೆ ಬದುಕುಳಿಯಲೇ ಇಲ್ಲ.


    ಈ ಆನೆ ಶಿಬಿರದ ಸಿಬ್ಬಂದಿ ಈ ಆನೆಯನ್ನು ಅದೆಷ್ಟು ಪ್ರೀತಿಸುತ್ತಿದ್ದರು, ಅದೆಷ್ಟು ಹಚ್ಚಿಕೊಂಡಿದ್ದರು, ಅದೆಷ್ಟು ಆರೈಕೆ ಮಾಡಿದ್ದರು ಎಂಬುದಕ್ಕೆ ಈ ಕಣ್ಣೀರಿನ ದೃಶ್ಯವೇ ಸಾಕ್ಷಿಯಾಗಿದ್ದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಕಣ್ಣಾಲಿಗಳು ತುಂಬುವಂತೆ ಮಾಡಿದೆ. ಈ ದೃಶ್ಯ ನೋಡಿದ ಅನೇಕರು ಭಾವುಕರಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *