LATEST NEWS
ಮಹಾ ಶಿವರಾತ್ರಿ ಹಿನ್ನಲೆ ಕದ್ರಿ ಮತ್ತು ಕುದ್ರೋಳಿ ದೇವಸ್ಥಾನದಲ್ಲಿ ಭಕ್ತರ ದಂಡು

ಮಂಗಳೂರು ಫೆಬ್ರವರಿ 26: ಶಿವರಾತ್ರಿ ಹಿನ್ನಲೆಯಲ್ಲಿ ಮಂಗಳೂರಿನ ಎಲ್ಲಾ ಶಿವ ದೇವಸ್ಥಾನಗಳಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದು, ಎಲ್ಲರೂ ಶಿವನಾಮದಲ್ಲಿ ತಲ್ಲೀನರಾಗಿದ್ದಾರೆ. ನಗರದ ಹೆಸರಾಂತ ಶಿವಕ್ಷೇತ್ರವಾದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಮತ್ತು ಕದ್ರಿ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಹಾಗೂ ರಥೋತ್ಸವ ನಡೆಯಲಿದ್ದು, ದಿನಪೂರ್ತಿ ನಡೆಯುವ ಜಾಗರಣೆಯಲ್ಲೂ ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದಾರೆ.
ಶಿವರಾತ್ರಿ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ವಿಶೇಷ ವಿದ್ಯುತ್ ಅಲಂಕಾರದಿಂದ ಶೃಂಗರಿಸಲಾಗಿದ್ದು, ಸಾವಿರ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಶಿವರಾತ್ರಿ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಭಜನೆಯನ್ನು ಆಯೋಜಿಸಲಾಗಿದೆ.

ಇಂದು ದಿನಪೂರ್ತಿ ಜಾಗರಣೆಯಲ್ಲಿ ಕುಳಿತುಕೊಳ್ಳುವ ಶಿವಭಕ್ತರು ಈಗಲೇ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ಶಿವನ ನಾಮ ಸಂಕೀರ್ತನದಲ್ಲಿ ತೊಡಗಿದ್ದಾರೆ.