Connect with us

  LATEST NEWS

  ಎಂಡಿಎಚ್ ಸಂಸ್ಥಾಪಕ ಧರ್ಮಪಾಲ ಗುಲಾಟಿ ನಿಧನ

  ನವದೆಹಲಿ ಡಿಸೆಂಬರ್ 3: ಖ್ಯಾತ ಮಸಾಲ ಪುಡಿ ತಯಾರಕ ಕಂಪೆನಿ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ಇಂದು ದಿಲ್ಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು, ಕಳೆದ ಮೂರು ವಾರಗಳಿಂದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಅವರಿಗೆ ಹಾರ್ಟ್ ಆಟ್ಯಾಕ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.


  ಮಹಾಶಯ್ ಧರಂಪಾಲ್ ಗುಲಾಟಿ ಅವರು ತನ್ನ ಆಪ್ತವಲಯದಲ್ಲಿ ದಾದಾಜಿ, ಮಹಾಶಯಜಿ ಎಂದೇ ಕರೆಯಲ್ಪಡುತ್ತಿದ್ದರು. 1923ರಲ್ಲಿ ಈಗಿನ ಪಾಕಿಸ್ಥಾನದ ಸಿಯಾಲ್ ಕೋಟ್‌ನಲ್ಲಿ ಗುಲಾಟಿ ಅವರ ತಂದೆ ಮಾಸಾಲ ಪದಾರ್ಥಗಳ ವ್ಯಾಪಾರ ನಡೆಸುತ್ತಿದ್ದರು. ದೇಶ ವಿಭಜನೆ ನಂತರ ದಿಲ್ಲಿಗೆ ಬಂದು ಅಲ್ಲಿಯ ಒಂದು ಕಿರಾಣಿಯಲ್ಲಿ ತಮ್ಮ ವ್ಯಾಪಾರ ಆರಂಭಿಸಿದರು. ಸದ್ಯ ಇದೀಗ ಎಂಡಿಎಚ್ ದೇಶದ ಅಗ್ರಗಣ್ಯ ಮಸಾಲ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದೆ.


  ಇನ್ನು ಮಹಾಶಯ್ ಧರಂಪಾಲ್ ಗುಲಾಟಿ 2019ರಲ್ಲಿ ಪದ್ಮಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ಮಹಾಶಯ್ ಧರಂಪಾಲ್ ಗುಲಾಟಿ ಅವರ ನಿಧನಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಹಾಶಯ್ ಧರಂಪಾಲ್ ಗುಲಾಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply