LATEST NEWS
ಮಹಾಮಸ್ತಕಾಭಿಷೇಕ ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ- ಯು.ಟಿ ಖಾದರ್
ಮಹಾಮಸ್ತಕಾಭಿಷೇಕ ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ- ಯು.ಟಿ ಖಾದರ್
ಬೆಳ್ತಂಗಡಿ ನವೆಂಬರ್ 20: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಫೆಬ್ರವರಿ 9 ರಿಂದ 18 ರವರೆಗೆ ನಡೆಯಲಿದ್ದು ಕರಾವಳಿ ಹಾಗೂ ಹೊರಭಾಗದಿಂದ ಬರುವ ಪ್ರವಾಸಿಗರಿಗೆ ಅತಿಮುಖ್ಯವಾದ ಮೂಲಭೂತ ಸೌಲಭ್ಯ ಹಾಗೂ ರಸ್ತೆ ಸೌಕರ್ಯವನ್ನು ಒದಗಿಸುವ ನಿಟ್ಟಿಲ್ಲಿ ನಮ್ಮ ಕಾರ್ಯ ಮುಂದುವರಿಯಬೇಕು ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಇಂದು ನಡೆದ ಮಹಾಮಸ್ತಕಾಭಿಷೇಕ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿದ ಅವರು 2019ರ ಫೆಬ್ರವರಿ 9 ರಿಂದ 18ರ ವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಅಪೂರ್ವ ಸಂದರ್ಭವಾಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಮ್ಮ ಜಿಲ್ಲೆಗೆ ಹಾಗೂ ಸರ್ಕಾರಕ್ಕೆ ಸಿಕ್ಕಿದ ಉತ್ತಮ ಅವಕಾಶ ಇದಾಗಿದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕಾಲಮಿತಿಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಇನ್ನು ಮುಂದೆ ಯಾವುದೇ ಕಾಮಗಾರಿಗಳನ್ನು ಆರಂಭಿಸುವಾಗ ಅದನ್ನು ಮಹಾಮಸ್ತಕಾಭಿಷೇಕಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಬಹುದೇ ಎಂದು ಪರಿಶೀಲಿಸಿ ಆರಂಭಿಸಬೇಕು ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.
2019ರ ಜನವರಿ ಪ್ರಥಮ ವಾರದಲ್ಲಿ ಧರ್ಮಸ್ಥಳದಲ್ಲಿ ಇನ್ನೊಂದು ಸುತ್ತಿನ ಸಮಲೋಚನಾ ಸಭೆಯನ್ನು ನಡೆಸಲಾಗುವುದು. ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳಿಗೆ ನೆರವಾಗುವ ದೃಷ್ಟಿಯಿಂದ ಒಂದು ವಾರದೊಳಗೆ ಜಿಲ್ಲಾಡಳಿತದಿಂದ ಧರ್ಮಸ್ಥಳಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುವುದಾಗಿ ಸಚಿವ ಖಾದರ್ ಪ್ರಕಟಿಸಿದರು.