ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಉತ್ಥಾನ ದ್ವಾದಶಿ ತುಳಸಿ ಪೂಜೆ

ಮಂಗಳೂರು ನವೆಂಬರ್ 20: ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ” ತುಳಸಿ ಪೂಜೆ ” ನಗರದ ರಥ ಬೀದಿಯಲ್ಲಿರುವ ಪುರಾತನ ದೇವಳ ಗಳಲೊಂದಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಶುಕ್ಲ ಪಕ್ಷದ ದ್ವಾದಶಿಯ ಈ ಪವಿತ್ರದಿನ ಉತ್ಥಾನ ದ್ವಾದಶಿ ದಂದು ದೇವಳದ ಪ್ರಕಾರದಲ್ಲಿರುವ ಶ್ರೀ ತುಳಸಿ ಕಟ್ಟೆಯಲ್ಲಿ ಚಾತುರ್ಮಾಸ ಸಂಪೂರ್ಣ ಗೊಳಿಸಿ ಶ್ರೀ ಶ್ರೀನಿವಾಸ ದೇವರ ಸಹಿತ ತುಳಸಿ ಪೂಜೆ ನೆರವೇರಿತು.

ಬೆಳಿಗ್ಗೆ ಪ್ರಾರ್ಥನೆ ಬಳಿಕ ಕ್ಷೀರಾಬ್ದಿ ಪೂಜೆ ನೆರವೇರಿತು. ದೇವಳದ ವೈದಿಕರಿಂದ ವಿಧಿ ವಿಧಾನಗಳು ಜರಗಿತು. ರಾತ್ರಿ ಶ್ರೀ ದೇವರ ಪೇಟೆ ಪಲ್ಲಕಿ ಉತ್ಸವ ನಡೆಯಿತು .ಇದೇ ರೀತಿ ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ದೇವರ ಸಮ್ಮುಖದಲ್ಲಿ ಕಾಶೀ ಮಠಾಧೀಶರ ದಿವ್ಯ ಹಸ್ತಗಳಿಂದ ತುಳಸಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ . ಎಲ್ . ಶೆಣೈ , ರಾಮಚಂದ್ರ ಕಾಮತ್, ಪ್ರಶಾಂತ್ ರಾವ್ ಹಾಗೂ ನೂರಾರು ಭಗವತ್ ಭಕ್ತರು ಉಪಸ್ಥಿತರಿದ್ದರು .

Facebook Comments

comments